ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕೋಸ್ಟ್ ರಿಕಾ ಹಾಗೂ ಸ್ವಿಜರ್ಲ್ಯಾಂಡ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರು ಸ್ವಿಜರ್ಲ್ಯಾಂಡ್ 16ರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.
ಕೋಸ್ಟ್ ರಿಕಾ ಹಾಗೂ ಸ್ವಿಜರ್ಲ್ಯಾಂಡ್ ತಂಡಗಳು ತಲಾ 2 ಗೋಲು ಬಾರಿಸಿದ್ದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. 3 ಪಂದ್ಯಗಳ ಪೈಕಿ 1 ಗೆಲುವು, 2 ಪಂದ್ಯದಲ್ಲಿ ಡ್ರಾ ಮಾಡಿಕೊಂಡಿರುವ ಸ್ವಿಜರ್ಲ್ಯಾಂಡ್ ಅಂಕಪಟ್ಟಿಯಲ್ಲಿ 5 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು 16ರ ಘಟ್ಟಕ್ಕೆ ಎಂಟ್ರಿ ಕೊಡಲು ಸಾಧ್ಯವಾಗಿದೆ.