ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

800 ಪುರುಷರ ಸೋಲಿಸಿದ ಗಟ್ಟಿಗಿತ್ತಿ!

Mainashree
Updated On : 1 Jul 2014, 9:43 am

ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿರುವ ಸಾಂಬಾ ನಾಡಲ್ಲಿ ಪವಾಡವೊಂದನ್ನು ಮಾಡಿದ್ದಾಳೆ ಅರ್ಜೆಂಟೀನಾದ ರೂಪದರ್ಶಿ ಫಿಯೋರೆಲ್ಲಾ ಕಾಸ್ಟಿಲ್ಲೋ. ಈಕೆ ಮಾಡಿದ ಸಾಧನೆ ಅಂತಿಂತದ್ದಲ್ಲ. ಬ್ರೆಜಿಲ್‌ನ ಇಪಾನೇಮಾ ಬೀಚ್‌ನಲ್ಲಿ ಬರೊಬ್ಬರಿ 800 ಪುರುಷರನ್ನು ಸೋಲಿಸಿದ್ದಾಳಂತೆ ಈ ಗಟ್ಟಿಗಿತ್ತಿ! ಹಾಗಂತಾ ನೀವು ಏನೇನೋ ಯೋಚನೆ ಮಾಡಬೇಡಿ. ಆಕೆ ಅಷ್ಟೊಂದು ಸಂಖ್ಯೆಯ ಪುರುಷರನ್ನು ಸೋಲಿಸಿದ್ದು, ಫ್ರೀಸ್ಟೈಲ್ ಫುಟ್ಬಾಲ್‌ನಲ್ಲಿ. ಫ್ರೀಸ್ಟೈಲ್ ಫುಟ್ಬಾಲ್‌ನಲ್ಲಿ ಈಗ ನಾನು ಮೆಸ್ಸಿಯನ್ನೂ ಸೋಲಿಸಬಲ್ಲೇ! ಎನ್ನುತ್ತಿದ್ದಾಳಂತೆ ಈಕೆ. ಆದರೆ, ಈಕೆಯೊಂದಿಗೆ ಫ್ರೀಸ್ಟೈಲ್ ಫುಟ್ಬಾಲ್ ಸ್ಪರ್ಧಿಗಿಳಿಯುವ ಯುವಕರು ಮಾತ್ರ ಕಂಗಾಲ್ ಆಗುತ್ತಿದ್ದಾರಂತೆ. ಕಾರಣ ಕೇಳಿದರೆ, ಹೇಳೊದಿಲ್ಲ ಮಾರಾಯ, ನೀವು ಸ್ಪರ್ಧೆಗಿಳಿದಾಗಲೇ ಗೊತ್ತಾಗುತ್ತದೆ ಎನ್ನುತ್ತಿದ್ದಾರಂತೆ. ಭೂಮಿಯ ಮೇಲಿನ ಶ್ರೇಷ್ಠ ಆಟಗಾರ ಲಯೋನೆಲ್ ಮೆಸ್ಸಿಯೊಂದಿಗೆ ಆಡಬೇಕು ಎಂಬ ಹೆಬ್ಬಯಕೆ ಇದೆಯಂತೆ ಈ ರೂಪದರ್ಶಿಗೆ. ಅಲ್ಲದೆ, ಅರ್ಜೆಂಟೀನಾ ಮತ್ತು ಬಾರ್ಸಿಲೋನಾದ ಮಾಂತ್ರಿಕ ಮೆಸ್ಸಿಗೆ ತನ್ನ ಕೌಶಲ್ಯವನ್ನು ತೋರಿಸಬೇಕು ಎಂಬ ಇರಾದೆಯನ್ನೂ ಹೊಂದಿದ್ದಾಳಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement