ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಕೆಮರೂನ್ ಮೇಲೆ ಫಿಕ್ಸಿಂಗ್ ಕರಿನೆರಳು

ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕ್ರೊವೇಷಿಯಾ ವಿರುದ್ಧ 0-4 ಅಂತರದಲ್ಲಿ ಕೆಮರೂನ್ ತಂಡ ಸೋತ...

Mainashree
Updated On : 2 Jul 2014, 12:11 pm

ಯೌಂಡೆ (ಕೆಮರೂನ್): ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕ್ರೊವೇಷಿಯಾ ವಿರುದ್ಧ 0-4 ಅಂತರದಲ್ಲಿ ಕೆಮರೂನ್ ತಂಡ ಸೋತ ಹಿನ್ನೆಲೆಯಲ್ಲಿ, ಕೆಮರೂನ್ ತಂಡದ ಆಟಗಾರರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಕೆಮರೂನ್ ರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ ತಂಡದ ಆಟಗಾರರ ವಿರುದ್ಧ ತನಿಖೆಗೆ ಮುಂದಾಗಿದೆ.
ಕೆಮರೂನ್ ರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ ಈ ಕುರಿತು ತನ್ನ ಹೇಳಿಕೆಯನ್ನು ಪ್ರಕಟಿಸಿದ್ದು, ಜೂ.18ರಂದು ಮಾನಸ್‌ನಲ್ಲಿ ನಡೆದ ಕ್ರೋವೇಷಿಯಾ ವಿರುದ್ಧದ ಎ ಗುಂಪಿನ ಪಂದ್ಯದಲ್ಲಿ ಏಳು ಆಟಗಾರರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪ ಬಂದಿದ್ದು, ಈ ಪ್ರಕರಣದ ತನಿಖೆಯನ್ನು ಸಂಸ್ಥೆಯ ಶಿಸ್ತು ಸಮಿತಿ ನಡೆಸಲಿದೆ ಎಂದು ತಿಳಿಸಿದೆ.
ಸಿಂಗಾಪುರ ಮೂಲದ ಮ್ಯಾಚ್ ಫಿಕ್ಸರ್ ವಿಲ್ಸನ್ ರಾಜ್ ಪೆರುಮಳ್ ಎಂಬ ವ್ಯಕ್ತಿ ಜತೆಗೆ ಕೆಮರೂನ್ ತಂಡದ ಆಟಗಾರರು ಭಾಗಿಯಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿರುವುದಾಗಿ ಜರ್ಮನಿಯ ಪತ್ರಿಕೆಯೊಂದು ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement