ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ವಿಶ್ವಕಪ್ ಫಲಿತಾಂಶ ಹೇಳಿಲ್ಲ: ಮ್ಯಾಚ್ ಫಿಕ್ಸರ್

ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಪಂದ್ಯಗಳ ಫಲಿತಾಂಶಗಳ ಬಗ್ಗೆ ಭವಿಷ್ಯ ನುಡಿದಿರುವ ಬಗ್ಗೆ ಜರ್ಮನಿ ...

Rashmi Kasaragodu
Updated On : 3 Jul 2014, 12:50 pm

ರಿಯೋ ಡಿ ಜನೈರೋ: ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಪಂದ್ಯಗಳ ಫಲಿತಾಂಶಗಳ ಬಗ್ಗೆ ಭವಿಷ್ಯ ನುಡಿದಿರುವ ಬಗ್ಗೆ ಜರ್ಮನಿ ಮ್ಯಾಗ್ಜಿನ್‌ನಲ್ಲಿ ವರದಿಯಾಗಿದ್ದನ್ನು ಮ್ಯಾಚ್ ಫಿಕ್ಸರ್ ನಿರಾಕರಿಸಿದ್ದಾನೆ.ವಿಲ್ಸನ್ ರಾಜ್ ಪೇರುಮಾಳ್ ಎಂಬಾತ ಪತ್ರಕರ್ತರೊಬ್ಬರೊಂದಿಗೆ ಮಾಡಿದ ಚಾಟ್‌ನಲ್ಲಿ ಕೆಮರೂನ್ ತಂಡ ಕ್ರೊವೇಷಿಯಾ ವಿರುದ್ಧ 4-0 ಗೋಲುಗಳ ಅಂತರದಿಂದ ಸೋಲುತ್ತದೆ ಮತ್ತು ಮೊದಲಾರ್ಧ ಪಂದ್ಯದಲ್ಲಿ ಓರ್ವ ಆಟಗಾರರನನ್ನು ಮರಳಿ ಕಳುಹಿಸಲಾಗುತ್ತದೆ ಎಂದು ಹೇಳಿದ ಕುರಿತು ಪತ್ರಿಕೆ ವರದಿ ಮಾಡಿತ್ತು. ವರದಿ ಕುರಿತು ತನಿಖೆ ಆರಂಭಿಸಿರುವುದಾಗಿ ಕೆಮರೂನ್ ಫುಟ್ಬಾಲ್ ಫೆಡರೇಷನ್ ತಿಳಿಸಿದೆ.ವರದಿಯಲ್ಲಿ ಪ್ರಕಟವಾದಂತೆಯೇ, ಜೂನ್ 18ರಂದು ನಡೆದ ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿದೆ. ಅಲ್ಲದೆ, ಕೆಮರೂನ್‌ನ ಮಿಡ್‌ಫೀಲ್ಡರ್ ಅಲೆಕ್ಸ್ ಸಾಂಗ್ ಅವರನ್ನು ಮೊದಲಾರ್ಧ ಪಂದ್ಯದಲ್ಲೇ ಮರಳಿ ಕಳುಹಿಸಲಾಗಿತ್ತು. ಪೇರುಮಾಳ್ ಫುಟ್ಬಾಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವುದರಲ್ಲಿ ಪ್ರಸಿದ್ಧರಾಗಿದ್ದಾರಂತೆ. ಅಲ್ಲದೆ, ಮ್ಯಾಚ್ ಫಿಕ್ಸ್ ಮಾಡಿದ ಹಿನ್ನೆಲೆಯಲ್ಲಿ ಆತನಿಗೆ ಈ ಮುನ್ನ ಫಿನ್ಲೆಂಡ್‌ನಲ್ಲಿ ಶಿಕ್ಷೆ ವಿಧಿಸಲಾಗಿತ್ತಂತೆ. ಅಲ್ಲದೆ, ಆಫ್ರಿಕಾ ತಂಡಗಳ ಪಂದ್ಯಗಳನ್ನು ಫಿಕ್ಸ್ ಮಾಡಿರುವ ಬಗ್ಗೆ ಶಂಕಿಸಲಾಗಿದೆಯಂತೆ ಎಂದು ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement