ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಮೆಸ್ಸಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ

Rashmi Kasaragodu
Updated On : 4 Jul 2014, 1:15 am

ರಿಯೋ ಡಿ ಜೆನೈರೊ: ಪ್ರಸಕ್ತ ವಿಶ್ವ ಫುಟ್ಬಾಲ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅರ್ಜೆಂಟೀನಾ ತಂಡದ ಲಯೋನಲ್ ಮೆಸ್ಸಿ ಕುರಿತ ಸಾಕ್ಷ್ಯಚಿತ್ರವನ್ನು ಬುಧವಾರ ರಿಯೋ ಡಿ ಜೆನೈರೊನಲ್ಲಿ ಪ್ರದರ್ಶನ ಮಾಡಲಾಯಿತು.
'ಮೆಸ್ಸಿ' ಎಂಬ ಶಿರ್ಷಿಕೆ ಹೊಂದಿರುವ ಈ ಸಾಕ್ಷ್ಯಚಿತ್ರವನ್ನು ಸ್ಪೇನ್ನ ಅಲೆಕ್ಸ್ ಡೆ ಲಾ ಇಗ್ಲೆಸಿಯಾ ಎಂಬುವರು ನಿರ್ದೇಶಿಸಿದ್ದು, ಮಾಜಿ ಅರ್ಜೆಂಟೀನಾ ಆಟಗಾರ ವಾಲ್ಡಾನೊ ಚಿತ್ರಕತೆ ಬರೆದಿದ್ದಾರೆ. ಲಯೋನಲ್ ಮೆಸ್ಸಿ ಚಿಕ್ಕ ವಯಸ್ಸಿನಲ್ಲಿ ಹೇಗೆ ಹಾರ್ಮೊನ್ ಸಮಸ್ಯೆಯನ್ನು ಎದುರಿಸಿ, ಫುಟ್ಬಾಲ್ನ ಶ್ರೇಷ್ಠ ಆಟಗಾರನಾಗಿ ಬೆಳೆದ ಬಂದ ಹಾದಿಯ ಕುರಿತು ಚಿತ್ರವನ್ನು ನಿರ್ಮಿಸಲಾಗಿದೆ. ಫುಟ್ಬಾಲ್ ಅಂಗಣದಲ್ಲಿ ಆತ ಅತ್ಯುತ್ತಮ ಆಟಗಾರ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಯಾವ ರೀತಿಯಲ್ಲಿ ಈ ಹಂತಕ್ಕೆ ಬೆಳೆದ ಎಂಬುದನ್ನು ತಿಳಿಯಬೇಕಾಗಿದೆ ಎಂದು ವಾಲ್ಡಾನೊ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಮೆಸ್ಸಿ ಹಾರ್ಮೊನ್ ಸಮಸ್ಯೆ ಜತೆ ಹೋರಾಡಿದ್ದರ ಜತೆಗೆ ಆತ ಚಿಕ್ಕ ವಯಸ್ಸಿನಲ್ಲಿ ರಸ್ತೆಯಲ್ಲಿ ಫುಟ್ಬಾಲ್ ಆಡಿದ್ದರಿಂದ ಹಿಡಿದು, ಆತನ ವೃತ್ತಿಪರ ಫುಟ್ಬಾಲ್ನ ವಿವಿಧ ಹಂತಗಳನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement