ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಯುಎಸ್ ತಂಡಕ್ಕೆ ಒಬಾಮಾ ಅಭಿನಂದನೆ

Rashmi Kasaragodu
Updated On : 4 Jul 2014, 11:58 am

ವಾಶಿಂಗ್ಟನ್: ಫಿಫಾ ವಿಶ್ವಕಪ್ ಪಂದ್ಯಾವಳಿಯ ಪ್ರಿಕ್ವಾಟರ್ಫೈನಲ್ನಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ ಅಮೆಕ ಫುಟ್ಬಾಲ್ ತಂಡಕ್ಕೆ ಅಧ್ಯಕ್ಷ ಬರಾಕ್ ಒಬಾಮಾ ಶ್ವೇತ ಭವನದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಬುಧವಾರ ತಂಡದ ನಾಯಕ ಕ್ಲಿಂಟ್ ಡೆಂಪ್ಸಿ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಟಿಮ್ ಹೋವರ್ಡ್ಗೆ ಕರೆ ಮಾಡಿದ ತಂಡದ ಪ್ರದರ್ಶನ ಮಾತ್ರವಲ್ಲದೆ, ದೇಶ ಹೆಮ್ಮೆ ಪಡುವಂತೆ ಮಾಡಿದ್ದಕ್ಕೆ ಒಬಾಮಾ ಅಭಿನಂದನೆ ಸಲ್ಲಿಸಿದ್ದರು.
ತಂಡವನ್ನು ಉತ್ತಮರೀತಿಯಲ್ಲಿ ಸಂಘಟಿಸಿ, ಮುನ್ನಡೆಸಿದ ಹಿನ್ನೆಲೆಯಲ್ಲಿ ತಂಡದ ಕೋಚ್ ಕ್ಲಿನ್ಸ್ಮನ್ ಅವರಿಗೂ ಅಭಿನಂದನೆ ತಿಳಿಸಿದರು.
ಒಬಾಮಾ ಜತೆಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಚುಕ್ ಹ್ಯಾಗೆಲ್ ಸಹ ಹೋವರ್ಡ್ಗೆ ಕರೆ ಮಾಡಿ ಅತ್ಯುತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದಕ್ಕೆ ಹಾಗೂ ವಿಶ್ವದಾಖಲೆ ನಿರ್ಮಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಹ್ಯಾಗೆಲ್, ಇದೇ ವರ್ಷಾಂತ್ಯದಲ್ಲಿ ಹೋರ್ವಡ್ ಹಾಗೂ ತಂಡದ ಆಟಗಾರರಿಗೆ ಪೆಂಟಗಾನ್ಗೆ ಭೇಟಿ ನೀಡಲು ಆಹ್ವಾನ ನೀಡಿದ್ದು, ಅಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಿದ್ದಾರೆ. ಈ ಮೂಲಕ ಹೋರ್ವಡ್ ಮುಂದೊಂದು ದಿನ ಅಮೆರಿಕಾ ರಕ್ಷಣಾ ಇಲಾಖೆಯ ಕಾರ್ಯದರ್ಶಿಯಾಗಬಹುದು ಎಂದು ಪೆಂಟಗಾನ್ನ ಮಾಧ್ಯಮ ಕಾರ್ಯದರ್ಶಿ ರೇರ್ ಆ್ಯಡಮ್ ಜಾನ್ ಕಿರ್ಬಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement