ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ತಾತ ವಿಧಿವಶ ಆದರೂ ತಂಡ ಬಿಟ್ಟು ಹೋಗದ ಮಾರ್ಸೆಲೋ

Rashmi Kasaragodu
Updated On : 7 Jul 2014, 1:07 am

ಬೆಲೋ ಹಾರಿಜಂಟ್ (ಬ್ರೆಜಿಲ್): ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿರುವ ಬ್ರೆಜಿಲ್ ತಂಡದ ಆಟಗಾರ ಮಾರ್ಸೆಲೋ ಅವರ ತಾತಾ ಮೃತಪಟ್ಟಿದ್ದಾರೆ. ಆದರೆ, ಮಾರ್ಸೆಲೋ ಮಾತ್ರ ತಂಡದಲ್ಲೇ ಉಳಿದುಕೊಂಡು ಅಭ್ಯಾಸದಲ್ಲಿ ನಿರತರಾಗಿದ್ದಾರೆ.ಮಾರ್ಸೆಲೋ ಅವರ ತಾತ 78 ವರ್ಷದ ಪೆಡ್ರೋ ವೀಯಿರಾ ಡಾ ಸಿಲ್ವಾ ಅವರು ರಿಯೋ ಡಿ ಜನೈರೋದ ಆಸ್ಪತ್ರೆಯೊಂದರಲ್ಲಿ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಬ್ರೆಜಿಲ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿದ ಕಲವೇ ಗಂಟೆಗಳಲ್ಲಿ ತಾತ ಮೃತಪಟ್ಟ ಸುದ್ದಿ ಬಂದಿದೆ.  ಸುದ್ದಿ ಬಂದ ತಕ್ಷಣ ಮಾರ್ಸೆಲೋ ಅವರಿಗೆ, ತಮ್ಮ ಕುಟುಂಬದೊಂದಿಗೆ ರಿಯೋ ಡಿ ಜನೈರೋಕ್ಕೆ ತೆರಳಲು, ಕೋಚ್ ಲೂಯಿಜ್ ಫೆಲಿಪೆ ಸ್ಕೋಲಾರಿ ಅವರು ಅನುಮತಿ ನೀಡಿದ್ದಾರೆ. ಆದರೆ, ತಂಡದ ಆಟಗಾರರೊಂದಿಗೆ ಸೇರಿಕೊಂಡು ಮೌನಾಚರಣೆ ಮಾಡಲು ಮಾರ್ಸೆಲೋ ತೀರ್ಮಾನಿಸಿದ್ದರಂತೆ.
 ನನ್ನ ತಾತ ಚಿಕ್ಕಂದಿನಿಂದಲೇ ನನಗೆ ಫುಟ್ಬಾಲ್ ಕುರಿತು ಅಪಾರ ಬೆಂಬಲ ನೀಡಿದ್ದಾರೆ. ಆದರೆ, ನೇಮಾರ್ ವಿಶ್ವಕಪ್ನ ಉಳಿದ ಪಂದ್ಯಗಳಿಗೆ ಅಲಭ್ಯರಾದ ತಕ್ಷಣವೇ ಈ ಸುದ್ದಿ ಬಂದಿದೆ ಎಂದು ಮಾರ್ಸೆಲೋ ವಿಷಾದ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement