ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ವಿಶ್ವಕಪ್‌ನ ಮತ್ತೊಂದು ದುರ್ಘಟನೆ

Rashmi Kasaragodu
Updated On : 7 Jul 2014, 1:22 am

ವಿಶ್ವಕಪ್ ಪಂದ್ಯ ವೀಕ್ಷಿಸುತ್ತಿದ್ದ ನೈಜೀರಿಯಾ ಅಭಿಮಾನಿಗಳ ನಡುವೆ ಬಾಂಬ್ ಸ್ಫೋಟದಿಂದ 21 ಜನರು ಮೃತಪಟ್ಟ ಘಟನೆ ಇನ್ನೂ ಹಸಿರಾಗಿರುವಾಗಲೇ, ಕೋಸ್ಟ ರಿಕಾದಲ್ಲಿ ವಿಶ್ವಕಪ್ ನೋಡುತ್ತಿದ್ದ ಮೂವರು ಅಭಿಮಾನಿಗಳನ್ನು ಇರಿದ ದುರ್ಘಟನೆಯೊಂದು ಭಾನುವಾರ ಸಂಭವಿಸಿದೆ. ತಮ್ಮ ತಂಡ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ ಸೆಣಸುವುದನ್ನು ನೋಡಲು, ಕೋಸ್ಟ ರಿಕಾದ ರಾಜ್ಯಧಾನಿ ಸ್ಯಾನ್ ಜೋಸ್ನಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳು ಸೇರಿದ್ದರು. ತಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದಾಗ, ಕೇಕೆ ಹಾಕುತ್ತಾ ಕುತೂಹಲದಿಂದ ದೈತ್ಯ ಸ್ಕ್ರೀನ್ ಮೇಲೆ ಪಂದ್ಯ ವೀಕ್ಷಿಸುತ್ತಿದ್ದರು. ಅಂತಹ ಸಂದರ್ಭದಲ್ಲೇ 3 ಅಭಿಮಾನಿಗಳು ರಕ್ತದ ಮಡುವಿನಲ್ಲಿ ಹೊರಳಾಡುತ್ತಿರುವುದನ್ನು ನೋಡಿದ ಅವರಿಗೆ ಎದೆ ಜೆಲ್ ಎಂದಿತು! ಹಬ್ಬದ ವಾತಾವರಣವಿದ್ದದ್ದು, ಒಮ್ಮೆಲೇ ಹಿಂಸಾತ್ಮಕ ಘಟನೆಗೆ ಸಾಕ್ಷಿಯಾಗಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ, ಇರಿತಕ್ಕೊಳಗಾದವರಿಗೆ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.
ಇತ್ತ ಕೇಂದ್ರ ಅಮೆರಿಕಾ ತಂಡವಾದ ಕೋಸ್ಟ ರಿಕಾ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲನುಭವಿಸಿತು. ಪಂದ್ಯದಲ್ಲಿ ಕೊಸ್ಟ ರಿಕಾ ಎರಡು ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದು, ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement