ಉಪಾಂತ್ಯ ಪಂದ್ಯಕ್ಕೆ ಡಿ ಮರಿಯಾ ಅಲಭ್ಯ
ಬೆಲೊ ಹೊರಿಜೊಂಟೆ: ಅರ್ಜೇಂಟೀನಾ ತಂಡದ ಪ್ರಮುಖ ಮಿಡ್ಫೀಲ್ಡ್ ಆಟಗಾರ ಏಂಜೆಲ್ ಡಿ ಮರಿಯಾ ತೊಡೆ ನೋವಿನ ಹಿನ್ನೆಲೆಯಲ್ಲಿ ಹಾಲೆಂಡ್ ವಿರುದ್ಧದ ವಿಶ್ವಕಪ್ ಉಪಾಂತ್ಯದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬೆಲ್ಜಿಯಂ ವಿರುದ್ಧದ ಎಂಟರ ಘಟ್ಟದ ಪಂದ್ಯದ ಮೊದಲ ಅವಧಿಯಲ್ಲಿ ಡಿ ಮರಿಯಾ ತಮ್ಮ ಬಲ ತೊಡೆಯಲ್ಲಿ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ತಂಡದ ವೈದ್ಯರಾದ ಡೇನಿಯಲ್ ಮಾರ್ಟೀನೆಜ್, ಮರಿನಾ ಅವರ ಸ್ನಾಯು ಸೆಳೆತ ತೀವ್ರವಾಗಿಲ್ಲವಾದರೂ ನೋವಿನ ಪ್ರಮಾಣ ಹೆಚ್ಚಿದೆ ಹಾಗಾಗಿ ಅವರು ವಿಶ್ರಾಂತಿ ತೆಗೆದುಕೊಳ್ಳಬೇಕಿದ್ದು, ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯರಿರುವುದಾಗಿ ತಿಳಿಸಿದರು. ಇನ್ನು ತೋಡೆ ನೋವಿನಿಂದ ಗುಣಮುಖರಾಗಿರುವ ತಂಡದ ಸ್ಟ್ರೈಕರ್ ಸೆರ್ಗಿಯೊ ಅಗ್ವೆರೊ ಸಂಪೂರ್ಣವಾಗಿ ಫಿಟ್ ಆಗಿರುವುದಾಗಿ ಮಾಹಿತಿ ಬಂದಿದೆ.