ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ನೇಮಾರ್ ಗಾಯಗೊಂಡಿದ್ದು ಬ್ರೆಜಿಲ್ಗೆ ಅನುಕೂಲ

Rashmi Kasaragodu
Updated On : 8 Jul 2014, 1:06 am

ಸ್ಯಾಂಟೊ ಆ್ಯಂಡ್ರೆ: ಪಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಟ್ರೈಕರ್ ನೇಮಾರ್ ಅವರು ಗಾಯಗೊಂಡು ಹೊರಗುಳಿದ ಹಿನ್ನೆಲೆಯಲ್ಲಿ ಬ್ರೆಜಿಲ್ ತಂಡಕ್ಕೆ ಅನುಕೂಲವಾಗಲಿದೆ ಎಂದು ಜರ್ಮನಿ ತಂಡದ ಮಿಡ್ಫೀಲ್ಡರ್ ಬಾಸ್ಟಿಯನ್ ಸ್ವೆನ್ಸ್ಟೈಗರ್ ಅಭಿಪ್ರಾಯಪಟ್ಟಿದ್ದಾರೆ. ನೇಮಾರ್ ತಂಡದಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ತಂಡದ ಇತರೆ ಆಟಗಾರರು ಒಗ್ಗಟ್ಟಿನಿಂದ ಆಡಲಿದ್ದು, ನೇಮಾರ್ಗಾಗಿ ಪ್ರಶಸ್ತಿ ಗೆಲ್ಲಲೇಬೇಕೆಂಬ ಹಠದೊಂದಿಗೆ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ನೇಮಾರ್ ಆಡದಿರುವುದು ನಮಗೂ ಬೇಸರ ತಂದಿದ್ದು, ಎದುರಾಳಿ ತಂಡದ ಪ್ರಮುಖ ಆಟಗಾರರು ಕಣದಲ್ಲಿದ್ದು, ಅವರ ವಿರುದ್ಧ ಹೋರಾಟ ನಡೆಸಲು ನಾವು ಇಚ್ಛಿಸುತ್ತೇವೆ ಎಂದು ಜರ್ಮನಿ ಆಟಗಾರ ತಿಳಿಸಿದ್ದಾರೆ. ನೇಮಾರ್ ಅತ್ಯಂತ ಪ್ರಮುಖ ಆಟಗಾರನಾಗಿದ್ದು, ಆತ ತನ್ನ ಸಾಮರ್ಥ್ಯವನ್ನು ವಿಶ್ವಕಪ್ನಲ್ಲಿ ಪ್ರದರ್ಶಿಸಿದ್ದಾರೆ ಎಂದು ಜರ್ಮನಿ ತಂಡದ ನಾಯಕ ಫಿಲಿಪ್ ಲಹ್ಮ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement