ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ನೇಮಾರ್ ಸ್ಥಾನಕ್ಕೆ ವಿಲಿಯನ್

Rashmi Kasaragodu
Updated On : 8 Jul 2014, 1:06 am

ಬೆಲೊ ಹೊರಿಜೊಂಟೆ: ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬೆನ್ನು ನೋವಿಗೆ ಸಿಲುಕಿ ಪಂದ್ಯಾವಳಿಯಿಂದ ಹೊರಗುಳಿದಿರುವ ಬ್ರೆಜಿಲ್ ತಂಡದ ಪ್ರಮುಖ ಸ್ಟ್ರೈಕರ್ ನೇಮಾರ್ ಸ್ಥಾನವನ್ನು, ಉಪಾಂತ್ಯದ ಪಂದ್ಯದಲ್ಲಿ ಮಿಡ್ ಫೀಲ್ಡರ್ ವಿಲಿಯನ್ ತುಂಬಲಿದ್ದಾರೆ ಎಂದು ತಂಡದ ಕೋಚ್ ಲೂಯಿಜ್ ಫೆಲಿಪೆ ಸ್ಕೊಲಾರಿ ಸುಳಿವು ನೀಡಿದ್ದಾರೆ.
ಸೆಮಿಫೈನಲ್ ಪಂದ್ಯದ ಸಿದ್ಧತೆಗಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ವಿಲಿಯನ್ ಅವರು ನೇಮಾರ್ ಸ್ಥಾನವನ್ನು ತುಂಬಿದ್ದರು. ಅಲ್ಲದೆ ತಂಡದ ಕೋಚ್ ಸ್ಕೋಲಾರಿ ತಂಡದಲ್ಲಿ ಖಾಲಿ ಉಳಿದಿರುವ ನೇಮಾರ್ ಸ್ಥಾನವನ್ನು ವಿಲಿಯನ್ ಸಾಧ್ಯವೇ ಎಂಬ ಬಗ್ಗೆ ಪ್ರಯೋಗ ನಡೆಸಿರಬಹುದು ಎಂಬ ಮಾತುಗಳು ಕೇಳಿಬಂದಿವೆ.
ತಂಡದ ಸ್ಟಾರ್ಟ್ ಆಟಗಾರರು ಮೈದಾನಕ್ಕಿಳಿಯದೇ ಜಿಮ್ನಲ್ಲಿ ತಯಾರಿ ನಡೆಸಿದರೆ, ಇತರೆ ಆಟಗಾರರು ಮೈದಾನದಲ್ಲಿ ಬೆವರಿಳಿಸಿದ್ದಾರೆ. ವಿಲಿಯನ್ ಪ್ರಸಕ್ತ ಟೂರ್ನಿಯಲ್ಲಿ ನೇಮಾರ್ ತೆಗೆದುಕೊಳ್ಳುತ್ತಿದ್ದ ಬ್ರೆಜಿಲ್ ದಾಳಿಯ ಮುನ್ನಡೆ ಹಾಗೂ ಮಿಡ್ಫೀಲ್ಡ್ ಸ್ಥಾನದಲ್ಲಿ ಅಭ್ಯಾಸ ನಡೆಸಿದರು.
ನೇಮಾರ್ ಅತ್ಯುತ್ತಮ ಗುಣಮಟ್ಟದ ಆಟಗಾರನಾಗಿದ್ದು, ತಂಡದ ಯಾವುದೇ ಆಟಗಾರರನ್ನು ಅವರ ಜತೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನನ್ನದು ವಿಭಿನ್ನ ಶೈಲಿ. ಆತ ಹೆಚ್ಚು ಸ್ಟೈಕರ್ ಆಟಗಾರನಾಗಿ ಹೆಚ್ಚು ಗೋಲು ದಾಖಲಿಸುತ್ತಾರೆ. ನನ್ನ ಶೈಲಿ ತಂಡದ ಆಟಗಾರರಿಗೆ ಉತ್ತಮ ಬೆಂಬಲ ನೀಡುವುದಾಗಿದೆ ಎಂದು ವಿಲಿಯನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement