ಅನಧಿಕೃತ ಟಿಕೆಟ್ ಮಾರಾಟ: ಅಧಿಕಾರಿ ಬಂಧನ
ರಿಯೋ ಡಿ ಜೆನೈರೊ: ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಟಿಕೆಟ್ ಮಾರಾಟದ ಹಕ್ಕು ಪಡೆದಿದ್ದ ಕಂಪನಿಯ ನಿರ್ದೇಶಕರನ್ನು ಅನಧಿಕೃತ ಟಿಕೆಟ್ ಮಾರಾಟದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇನ್ನು ಪಂದ್ಯಾವಳಿಯ ಆತಿಥ್ಯ ಸಮಿತಿಯ ನಿರ್ದೇಶಕರಾದ ರೇ ವೇಲನ್ ಅವರನ್ನು ಸೋಮವಾರ ರಾತ್ರಿ ರಿಯೋ ಡಿ ಜೆನೈರೊದ ಐಷಾರಾಮಿ ಹೊಟೇಲ್ನಲ್ಲಿ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ವೇಲನ್ ಅವರನ್ನು, ಅನಧಿಕೃತ ಟಿಕೆಟ್ ಮಾರಾಟಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಬಂಧಿಸಿ, ವಿಚಾರಣೆ ನಡೆಸಲಾಗಿದೆ. ಒಂದು ವೇಳೆ ಅವರು ತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗಲಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಫ್ಯಾಬಿಯೊ ಬಾರುಕೆ ತಿಳಿಸಿದ್ದಾರೆ.
ವೇಲನ್ ಅವರು 64 ವರ್ಷದ ಬ್ರಿಟಿಷ್ ಪ್ರಜೆಯಾಗಿದ್ದು, ಅವರ ಹೋಟೆಲ್ ಕೊಠಡಿಯಲ್ಲಿ 100 ಟಿಕೆಟ್ಗಳು ಸಿಕ್ಕಿವೆ ಎಂಬ ವರದಿ ಬಂದಿದೆ.