ಹಳದಿ ಕಾರ್ಡ್ ಕಡಿಮೆ ರೆಫ್ರಿಗಳಿಗೆ ಫಿಫಾ ಮನವಿ
ಬರ್ಲಿನ್: ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಹಳದಿ ಕಾರ್ಡ್ಗಳು ಬಂದಿರುವುದರಿಂದ ಫಿಫಾ ಕಡಿಮೆ ಹಳದಿ ಕಾರ್ಡ್ ನೀಡುವಂತೆ ರೆಫರಿಗಳಿಗೆ ಮನವಿ ಮಾಡಿದೆ.
ಪಂದ್ಯದ ವೇಳೆ ಆಟಗಾರರ ನಡುವೆ ಘರ್ಷಣೆ ಉಂಟಾಗಿ ಆಟಗಾರ ಗಾಯಗೊಂಡರೆ, ಉದಾಹರಣೆಗೆ ನೇಮಾರ್ ಗಾಯಗೊಂಡಂತೆ ಆದರೆ ಮಾತ್ರ ಹಳದಿ ಕಾರ್ಡ್ ನೀಡಬೇಕೆಂದು ಫಿಫಾ ರೆಫರಿಗಳಿಗೆ ತಿಳಿಸಿದೆ ಎಂದು ಜರ್ಮನಿಯ ಪತ್ರಿಕೆಯೊಂದು ವರದಿ ಮಾಡಿದೆ. ಈ ರೀತಿ ನಿರ್ಧಾರದಿಂದ ರೆಫರಿಗಳು ಪಂದ್ಯದ ವೇಳೆ ಆಟಗಾರರ ನಿರ್ಧಾರವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಬ್ರೆಜಿಲ್ ಹಾಗೂ ಕೊಲಂಬಿಯಾ ನಡುವಣ ಪಂದ್ಯದಲ್ಲಿ 54 ಫೌಲ್ ಆದರೂ ಕೇವಲ 4 ಹಳದಿ ಕಾರ್ಡ್ ಮಾತ್ರ ನೀಡಲಾಯಿತು ಎಂದು ಪತ್ರಿಕೆ ವರದಿ ಮಾಡಿದೆ.