ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಫೈನಲ್ ಪ್ರವೇಶಿಸಿರುವ ಜರ್ಮನಿ ಗೆಲ್ಲಲಿ ಎಂದು ಕೆಲವರು ಪ್ರಾರ್ಥಿಸುತ್ತಿದ್ದರೆ, ಅರ್ಜೆಂಟೀನಾ ಗೆಲ್ಲಲಿ ಎಂದು ಇನ್ನು ಕೆಲ ಅಭಿಮಾನಿಗಳು ಪ್ರಾರ್ಥನೆ ಆರಂಭಿಸಿದ್ದಾರೆ. ಅರ್ಜೆಂಟೀನಾ ತಂಡ ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಯೋನೆಲ್ ಮೆಸ್ಸಿ ಅವರನ್ನು ಒಳಗೊಂಡಿದೆ. ಥಾಮಸ್ ಮುಲ್ಲರ್ ಸೇರಿದಂತೆ ಹಲವಾರು ಸ್ಟಾರ್ ಆಟಗಾರರನ್ನು ಜರ್ಮನಿ ಹೊಂದಿದೆ. ಪಂದ್ಯವನ್ನು ವೀಕ್ಷಿಸಲು ಇಡೀ ವಿಶ್ವದ ಫುಟ್ಬಾಲ್ ಅಭಿಮಾನಿಗಳ ಬಳಗ ತುದಿಗಾಲ ಮೇಲೆ ನಿಂತಿದೆ. ಇದೆಲ್ಲದರ ನಡುವೆ ಪಂದ್ಯಕ್ಕೆ ವಿಶೇಷ ಮೆರಗು ನೀಡಲು ಸುಮಾರು 20ಕ್ಕೂ ಅಧಿಕ ಬೆಡಗಿಯರು ಸಿದ್ಧವಾಗಿದ್ದಾರೆ. ಅವರು ಬೇರಾರೂ ಅಲ್ಲ. ಉಭಯ ತಂಡಗಳಲ್ಲಿರುವ ಆಟಗಾರರ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್‌ಗಳು.