1950ರ ಬ್ರೆಜಿಲ್ ಫಿಫಾ ವಿಶ್ವಕಪ್ ಪಂದ್ಯಾವಳಿಗಾಗಿ ನಿರ್ಮಿಸಿದ ಕ್ರೀಡಾಂಗಣವಾಗಿದ್ದು, ಇಲ್ಲಿ ಜುಲೈ 13ರ ಫೈನಲ್ ಪಂದ್ಯ ಹಾಗೂ ಕ್ವಾರ್ಟರ್‌ಫೈನಲ್ ಸೇರಿದಂತೆ ಒಟ್ಟು ಏಳು ಪಂದ್ಯಗಳನ್ನು ಆಯೋಜಿಸಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಹೆಚ್ಚು ಪಂದ್ಯ ಆಯೋಜಿಸುತ್ತಿರುವ ಕ್ರೀಡಾಂಗಣ ಸಹ ಇದಾಗಿದೆ. ಈ ಹಿಂದೆ ಕ್ರೀಡಾಂಗಣದ ಸಾಮರ್ಥ್ಯ 2,00,000. ಅಲ್ಲದೆ ವಿಶ್ವದ ದೊಡ್ಡ ಫುಟ್ಬಾಲ್ ಕ್ರೀಡಾಂಗಣವಾಗಿತ್ತು. ಅಲ್ಲದೆ ಫುಟ್ಬಾಲ್ ಕ್ರೀಡಾ ಇತಿಹಾಸದಲ್ಲಿ ಅತಿ ಹೆಚ್ಚು ಪ್ರೇಕ್ಷಕರು ಸೇರಿದ್ದ ಪಂದ್ಯಕ್ಕೆ ಈ ಕ್ರೀಡಾಂಗಣ ಸಾಕ್ಷಿಯಾಗಿತ್ತು. ಆದರೆ ಈಗ ಇದರ ಸಾಮರ್ಥ್ಯವನ್ನು 74,698ಕ್ಕೆ ಇಳಿಸಲಾಗಿದ್ದು, ದೇಶದ ದೊಡ್ಡ ಕ್ರೀಡಾಂಗಣವಾಗಿ ಉಳಿದಿದೆ.