ಮೆಸ್ಸಿ ಹೆಚ್ಚು ಬೆಲೆಯುಳ್ಳ ಆಟಗಾರ
ಬಾರ್ಸಿಲೋನಾ ಹಾಗೂ ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಯೋನೆಲ್ ಮೆಸ್ಸಿ ಅತ್ಯಂತ ಬೆಲೆಯುಳ್ಳ ಆಟಗಾರನಾಗಿ ಹೊರಹೊಮ್ಮಿರುವುದು ಮಾರುಕಟ್ಟೆಯ ಹೊಸ ವರದಿಯಿಂದ ತಿಳಿದು ಬಂದಿದೆ. ಸ್ವಿಜರ್ಲೆಂಡ್ ಮೂಲದ ಸಿಐಇಸಿ ಫುಟ್ಬಾಲ್ ವಿಶ್ಲೇಷಣಾ ಸಂಸ್ಥೆ ತನ್ನ ಆಟಗಾರರ ವಾರ್ಷಿಕ ಮಾರುಕಟ್ಟೆ ವರದಿಯನ್ನು ಬಿಡುಗಡೆಗೊಳಿಸಿದ್ದು, ಮೆಸ್ಸಿ ರು. 1,745,03,70,000 (294 ಮಿಲಿಯನ್ ಅಮೆರಿಕನ್ ಡಾಲರ್) ಮೊತ್ತದ ಆಟಗಾರನಾಗಿದ್ದಾರೆ ಎಂದು ತಿಳಿಸಿದೆ.