ವಿಶ್ವಕಪ್ ನಂತರ ವಿಲ್ಲಾ ಅಲ್ವಿದಾ
ಬಾರ್ಸಿಲೋನಾ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ನ ಮಾಜಿ ಆಟಗಾರ ಡೇವಿಡ್ ವಿಲ್ಲಾ...
ವಾಶಿಂಗ್ಟನ್: ಬಾರ್ಸಿಲೋನಾ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ನ ಮಾಜಿ ಆಟಗಾರ ಡೇವಿಡ್ ವಿಲ್ಲಾ, ಮುಂಬರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ನಂತರ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.
ಡೇವಿಡ್ ವಿಲ್ಲಾ ಸೋಮವಾರ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದ ವೇಳೆ ಈ ವಿಷಯ ಪ್ರಕಟಿಸಿದ್ದಾರೆ. 50 ವರ್ಷಗಳವರೆಗೂ ನಾನು ಸ್ಪೇನ್ ತಂಡದ ಪರ ಆಡಲು ಇಚ್ಛಿಸುತ್ತೇನೆ ಆದರೆ, ವಾಸ್ತವನ್ನು ಅರಿತ ನಂತರ ಈ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಈ ನಿರ್ಧಾರದ ಕುರಿತು ಸ್ಪೇನ್ ತಂಡದ ಕೋಚ್ ಡೆಲ್ ಬಾಸ್ಕ್ಯೂ ಜತೆ ಚರ್ಚಿಸಿದ್ದು, ಆತ ನನ್ನ ನಿರ್ಧಾರವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.