ಉದ್ಘಾಟನೆ ಪಂದ್ಯಕ್ಕೆ ಗ್ರೀನ್ ಸಿಗ್ನಲ್
ಸೌ ಪೊಲೊ: ಗುರುವಾರ ಆರಂಭವಾಗಲಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಇಲ್ಲಿನ ಇಟಾಕ್ವೆರಾವ್ ಕ್ರೀಡಾಂಗಣದಲ್ಲಿ ನಡೆಸಲು ಬ್ರೆಜಿಲ್ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬ್ರೆಜಿಲ್ನ ಅಗ್ನಿಶಾಮಕ ಇಲಾಖೆ ಪರಿಶೀಲನೆ ನಡೆಸಿದ್ದು, ಅಲ್ಲಿನ ತಾತ್ಕಾಲಿಕ ಗ್ಯಾಲರಿಯನ್ನು ಪರೀಕ್ಷಿಸಿ ನಂತರ ಒಪ್ಪಿಗೆ ಸೂಚಿಸಲಾಗಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. ಈ ಮೈದಾನದಲ್ಲಿ ಜು.9ರ ಸೆಮಿಫೈನಲ್ ಪಂದ್ಯ ಸೇರಿದಂತೆ ಒಟ್ಟು 6 ವಿಶ್ವಕಪ್ ಪಂದ್ಯಗಳು ನಡೆಯಬೇಕಿದ್ದು, ಇದರ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ. ಕಾಮಗಾರಿ ವಿಳಂಬ ಹಾಗೂ ಕಾಮಗಾರಿ ವೇಳೆ ಮೂವರು ಕಾರ್ಮಿಕರು ಮೃತಪಟ್ಟಿದ್ದರಿಂದ ಇಲ್ಲಿನ ಸುರಕ್ಷತೆ ಬಗ್ಗೆ ಅನುಮಾನ ಮೂಡಿದ್ದವು. ಈ ಕ್ರೀಡಾಂಗಣವನ್ನು ಆರಂಭದಲ್ಲಿ ಮೊದಲು ನಿಗದಿಯಾಗಿದ್ದಕಿಂತ 6 ಸಾವಿರ ಆಸನಗಳನ್ನು ಕಡಿಮೆ ಮಾಡಲಾಗಿದೆ. ಹಾಗಾಗಿ ಈಗ ಒಟ್ಟು 61,600 ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.