ಫಿಫಾ ವಿಶ್ವಕಪ್ 2014

ಮರೆಯಾದವರು

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಬೇಕೆಂಬ ಆಸೆ ಪ್ರತಿಯೊಬ್ಬ ಫುಟ್ಬಾಲಿಗನ ಕನಸು..

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಬೇಕೆಂಬ ಆಸೆ ಪ್ರತಿಯೊಬ್ಬ ಫುಟ್ಬಾಲಿಗನ ಕನಸು. ಆದರೆ ಆ ಕನಸು ಎಲ್ಲರಿಗೂ ನನಸಾಗುವುದಿಲ್ಲ. ಕೆಲವೊಮ್ಮೆ ಪ್ರತಿಭೆ ಸಾಮರ್ಥ್ಯ ಎಲ್ಲಾ ಇದ್ದರೂ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಗಾಯದ ಸಮಸ್ಯೆಗೆ ಸಿಲುಕದೇ ಕ್ಲಬ್ ಹಾಗೂ ದೇಶೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಖ್ಯಾತಿ ಗಳಿಸಿದ್ದರೂ, ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತಮ್ಮ ರಾಷ್ಟ್ರೀಯ ತಂಡದಲ್ಲಿ ಕೆಲವರು ಸ್ಥಾನ ಪಡೆಯಲು ವಿಫಲರಾಗುತ್ತಾರೆ. ಈ ಬಾರಿ ಕೆಲವು ಪ್ರಖ್ಯಾತ ಆಟಗಾರರು ತಮ್ಮ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದು, ಅಚ್ಚರಿ ಮೂಡಿಸಿದೆ. ಇಂತಹ ಕೆಲವು ಆಟಗಾರರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಮಾರಿಯೊ ಗೊಮೆಜ್
ಜರ್ಮನಿ ತಂಡದ ಮ್ಯಾನೇಜರ್ ಜೋಚಿಮ್ ಲೋ, 23 ಸದಸ್ಯರ ತಂಡವನ್ನು ಪ್ರಕಟಿಸಿದಾಗ ಗೊಮೆಜ್ ಅವರನ್ನು ಕೈಬಿಟ್ಟಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ ಗೊಮೆಜ್ ಅವರನ್ನು ಕೈಬಿಟ್ಟಿದ್ದು, ಜೋಚಿಮ್ ಅವರ ಅತ್ಯಂತ ಕೆಟ್ಟ ನಿರ್ಧಾರ ಎಂದು ಹೇಳಿದರು. ಕಾರಣ 23 ಸದಸ್ಯರ ತಂಡದಲ್ಲಿ ಜರ್ಮನಿ ಕೇವಲ 2 ಮಾತ್ರ ಪೂರ್ಣ ಪ್ರಮಾಣದ ಸ್ಟ್ರೈಕರ್‌ಗಳಾಗಿದ್ದಾರೆ. ಗೊಮೆಜ್ ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನು ಅನುಭವ ಪಡೆಯಬೇಕಿರುವ ಸ್ಟ್ರೈಕರ್‌ಗಳಾದ ಮಿರ್ಸೊಲವ್ ಕ್ಲೊಸೆ ಮತ್ತು ಕೆವಿನ್ ವೊಲಾಂಡ್ ಅವರ ಜತೆಗೆ ತಂಡದಲ್ಲಿ ಸ್ಥಾನ ಪಡೆಯಬೇಕಿತ್ತು. ಹಾಗಾಗಿ ತಂಡದ ಆಕ್ರಮಣಕಾರಿಯ ನೇತೃತ್ವವನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.

ಕಾರ್ಲೊಸ್ ಟೆವೆಜ್
ಕ್ಲಬ್ ಮಟ್ಟದಲ್ಲಿ 45 ಪಂದ್ಯಗಳಿಂದ 21 ಗೋಲು ದಾಖಲಿಸಿದ್ದರೂ, ಅರ್ಜೆಂಟೀನಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ನಿರಾಸೆ ಅನುಭವಿಸಿರುವುದು ಕಾರ್ಲೊಸ್. ಆದರೆ ತಂಡದ ಮ್ಯಾನೇಜರ್ ಅಲೆಕ್ಸಾಂಡ್ರೊ ಲಬೆಲ್ಲಾಗೆ ಇತರೆ ಪ್ರತಿಭಾವಂತ ಆಟಗಾರರ ಹೊರತಾಗಿ ಕಾರ್ಲೊಸ್ ಆಯ್ಕೆ ಮಹತ್ವ ಎನಿಸಲಿಲ್ಲ. ಅರ್ಜೆಟೀನಾ ತಂಡದಲ್ಲಿ ಖ್ಯಾತ ಆಟಗಾರರಾದ ಲಯೋನಲ್ ಮೆಸ್ಸಿ, ಸೆರ್ಗಿಯೊ ಅಗ್ವೆರೊ ಮತ್ತು ಗೊಂಜಾಲೊ ಹಿಗ್ವೆನ್ ತಂಡದ ಆಕ್ರಮಣಕಾರಿಯನ್ನು ಮುನ್ನಡೆಸಲಿದ್ದಾರೆ. 2011ರಿಂದ ಲಾ ್‌ಲ್ಬೆಸಲಿಸ್ಟೆ ಪರ ಆಡುತ್ತಿರುವ ಕಾರ್ಲೊಸ್ ತಂಡದ ನಂಬಿಕಸ್ತ ಆಟಗಾರನಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ.

ಸಮೀರ್ ನಾಸಿರ್
ಮ್ಯಾಂಚೆಸ್ಟರ್‌ನ ಮಿಡ್‌ಫೀಲ್ಡರ್ ಸಮೀರ್ ನಾಸಿರ್ ಕ್ಲಬ್ ಮಟ್ಟದಲ್ಲಿ ಮಹತ್ವದ ಪಾತ್ರಬೀರಿದ್ದು, ಖ್ಯಾತ ಆಟಗಾರನಾಗಿದ್ದಾರೆ. ಆದರೆ ಫ್ರಾನ್ಸ್ ತಂಡದ ಮ್ಯಾನೇಜರ್ ಡೈಡರ್ ಡಸ್‌ಚಾಂಪ್ಸ್ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ 30 ಆಟಗಾರರ ಸಂಭಾವ್ಯರ ಪಟ್ಟಿಯಲ್ಲೂ ಈತನ ಹಸರು ಕಾಣದಿರುವುದು ಅಚ್ಚರಿ ಮೂಡಿಸಿತ್ತು. ನಾಜಿರ್ ಕ್ಲಬ್ ಪಂದ್ಯಾವಳಿಯಲ್ಲಿ ಅಸಭ್ಯ ವರ್ತನೆ ಆತ ತಂಡದಿಂದ ಹೊರಗುಳಿಯಲು ಕಾರಣ ಎಂಬ ಮಾತುಗಳು ಸಹ ಕೇಳಿಬಂದಿವೆ. ತಮ್ಮ ತಂಡದ ಆಟಗಾರರ ಜತೆಗಿನ ಭಿನ್ನಾಭಿಪ್ರಾಯ ಹಾಗೂ 2012ರ ಯ್ಯೂರೊ ಕಪ್ ಗೆಲವಿನ ಸಂಭ್ರಮಾಚರಣೆಯಲ್ಲಿನ ವರ್ತನೆ, ಆತನ ವೃತ್ತಿ ಜೀವನಕ್ಕೆ ಮುಳುವಾಗಿದೆ ಎನ್ನಲಾಗುತ್ತಿದೆ

ಐಸ್ಕೊ
ಸ್ಪೇನ್ ತಂಡ ಪ್ರೋಟವಾದ ನಂತರ ಐಸ್ಕೊ ಹೆಸರು ಕಾಣದಿದ್ದಾಗ ಹಲವರು ಹುಬ್ಬೇರಿತ್ತು. ಆದರೆ ತಂಡದಲ್ಲಿ ಇತರೆ ಆಟಗಾರರನ್ನು ನೋಡಿದಾಗ ಐಸ್ಕೊ ತಂಡದಲ್ಲಿ ಯಾಕೆ ಸ್ಥಾನ ಕಳೆದುಕೊಂಡರು ಎಂಬುದು ಅರ್ಥವಾಗುತ್ತದೆ. ಕ್ಸೇವಿ, ಇನಿಯೆಸ್ಟಾ, ಬಸ್‌ಕ್ವೆಸ್ಟ್, ಫ್ಯಾಬ್ರೆಗಾಸ್ ಹಾಗೂ ಕ್ಸಾಬಿ ಆಲೊನ್ಸೊರಂತಹ ಆಟಗಾರರು ತಂಡದಲ್ಲಿ ಸ್ಥಾನ ಪಡೆದಾಗ, ಐಸ್ಕೊರಂತಹ ಪ್ರತಿಭೆ ಇರುವ ಆಟಗಾರರ ಸ್ಥಾನ ಸಹಜವಾಗಿಯೇ ವಿರಳವಾಗುತ್ತದೆ.  ಲಾಸ್ ಬ್ಲಾಂಕೊಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು, ಐಸ್ಕೊ ಇನ್ನು 23 ವಷಂದ ಹರೆಯದವನಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಾನ ಪಡೆಯುವ ಅವಕಾಶವಿರುವುದು ನೆಮ್ಮದಿ ತಂದಿದೆ.

ರೊನಾಲ್ಡಿನೊ
ವಿಶ್ವ ಫುಟ್ಬಾಲ್ ಕಂಡ ಅತ್ಯುತ್ತಮ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರಾದ ಬ್ರೆಜಿಲ್‌ನ ರೊನಾಲ್ಡಿನೊ ಈ ಬಾರಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವುದು ಹಲವು ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಬಾರಿ ಬ್ರೆಜಿಲ್ ತಂಡದ ಮ್ಯಾನೇಜರ್ ಸ್ಕೊಲಾರಿ, 30 ಮಂದಿಯ ಸಂಭಾವ್ಯರ ಪಟ್ಟಿಯಲ್ಲೂ ರೊನಾಲ್ಡಿನೊ ಅವರ ಹೆಸರನ್ನು ಕೈಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು. 2013ನೇ ಸಾಲಿನಲ್ಲಿ ಅಟ್ಲೆಟಿಕೊ ಮಿನಾರಿಯೊ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ರೊನಾಲ್ಡಿನೊ, 17 ಗೋಲು ಹಾಗೂ 11 ಗೋಲುಗಳಿಗೆ ನೆರವಾಗಿದ್ದರು. ಅಲ್ಲದೆ ರೊನಾಲ್ಡಿನೊ ಈಗ 34 ವರ್ಷವಾಗಿದ್ದು, ವಿಶ್ವಕಪ್‌ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಕೊನೆಯ ಅವಕಾಶವಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ