ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಗೆಲ್ಲುವ ಛಲದಲ್ಲಿ ಚಿಲಿ

Rashmi Kasaragodu
Updated On : 13 Jun 2014, 1:14 am

ಕ್ಯೂಬಾ (ಬ್ರೆಜಿಲ್): ತಾನು ಗೆದ್ದೇ ತೀರುತ್ತೇನೆ ಎಂಬ ಛಲದಲ್ಲಿ ಬಲಿಷ್ಠ ಚಿಲಿ, ಎಂತಹ ಬಲಿಷ್ಠ ತಂಡವೇ ಇರಲಿ ನಾವು ಸೋಲುವುದಿಲ್ಲ ಎಂಬ ಹಠಮಾರಿತನದಲ್ಲಿರುವ ಆಸ್ಟ್ರೇಲಿಯಾ ಬ್ರೆಜಿಲ್ನಲ್ಲಿ ಆರಂಭವಾಗಿರುವ ಪ್ರತಿಷ್ಠಿತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಹೋರಾಟ ನಡೆಸಲಿವೆ. ಪಂದ್ಯಾವಳಿಯ 'ಬಿ' ಗುಂಪಿನಲ್ಲಿರುವ ಈ ತಂಡಗಳಲ್ಲಿ ಚಿಲಿ ಫಿಫಾ ರ್ಯಾಂಕಿಂಗ್ನಲ್ಲಿ 14ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 62ನೇ ಸ್ಥಾನದಲ್ಲಿದೆ. ಹೀಗಾಗಿ ದಕ್ಷಿಣ ಅಮೆರಿಕ ದೇಶವಾದ ಚಿಲಿ ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್.
ಚಿಲಿ ಬಲಿಷ್ಠವಾಗಿರಬಹುದು, ಆದರೆ ಎಂತಹ ಒತ್ತಡದ ಪರಿಸ್ಥಿತಿಯಲ್ಲೂ ಸೋಲುವುದಿಲ್ಲ ಎಂಬ ಹಠಮಾರಿತನದಲ್ಲಿದೆ ಆಸ್ಟ್ರೇಲಿಯಾ. 1974ರಲ್ಲಿ ವಿಶ್ವಕಪ್ ಪಂದ್ಯಾವಳಿಗೆ ಪದಾರ್ಪಣೆ ಮಾಡಿದ ವರ್ಷವೇ ಚಿಲಿ ವಿರುದ್ಧ ಗೋಲು ಗಳಿಸದೇ ಡ್ರಾ ಸಾಧಿಸಿದ ಪಂದ್ಯವೇ, ಆಸೀಸ್ ಹಠಮಾರಿ ತನಕ್ಕೆ ಸಾಕ್ಷಿಯಾಗಿದೆ. 'ನಮ್ಮ ಎದುರಾಳಿ ಯಾರು ಎಂಬ ಬಗ್ಗೆ ಚಿಂತೆ ಮಾಡುವುದಿಲ್ಲ. ಅಲ್ಲಿ 11 ರೊನಾಲ್ಡೊ ಅಥವಾ ಮೆಸ್ಸಿಯಂತಹ ಆಟಗಾರರು ಇರಲಿ. ನಾವು ನಮ್ಮ ದೇಶ ಹೆಮ್ಮೆಪಡುವಂತಹ ಪ್ರದರ್ಶನ ನೀಡುವುದು ಮೊದಲ ಆದ್ಯತೆ. ಈ ಹಂತ ತಲುಪಲು ನಾವು ತುಂಬಾ ಶ್ರಮ ಹಾಕಿದ್ದೇವೆ. ಅದು ಸಾರ್ಥಕವಾಗಬೇಕು' ಎಂದಿದ್ದಾರೆ ತಂಡದ ಮಿಡ್ಫೀಲ್ಡರ್ ಡಾರಿಯೋ ವಿಡಾಸಿಕ್.
ಇದುವರೆಗೂ ಉಭಯ ತಂಡಗಳು ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ, ಉಳಿದ ಮೂರು ಪಂದ್ಯಗಳಲ್ಲಿ ಚಿಲಿ ವಿಜಯ ಕಂಡಿದೆ.



ಆಸ್ಟ್ರೇಲಿಯಾ ತಂಡದ ಶಕ್ತಿ
ಕ್ರಿಸ್ಟಾಲ್ ಪ್ಯಾಲೇಸ್ ಫುಟ್ಬಾಲ್ ಕ್ಲಬ್ನ ಮೈಲ್ ಜೆಡಿನಾಕ್, ಅನುಭ ವಿ ಆಟಗಾರರಾದ ಕಾಹಿಲ್ ಹಾಗೂ ಮಾರ್ಕ್ ಬ್ರೆಸಿಯಾನೋ. ಅಲೆಕ್ಸ್ ವಿಲ್ಕಿನ್ಸನ್, ಮಿಡ್ಫೀಲ್ಡರ್ ಜೇಮ್ಸ್ ಟ್ರೋಯಿಸಿ, ರಕ್ಷಣಾ ವಿಭಾಗದಲ್ಲಿ ಜಾಸನ್ ಡೇವಿಡ್ಸನ್ ಸೇರಿದಂತೆ ಮುಂತಾದ ಆಟಗಾರರು ಆಸೀಸ್ ಪರ ಪ್ರಮುಖ ಪಾತ್ರ ವಹಿಸಲಿದ್ದಾರೆ.


ಚಿಲಿ ತಂಡದ ಶಕ್ತಿ
ಮಿಡ್ಫೀಲ್ಡರ್ ಆರ್ಟೋರೋ ವಿಡಾಲ್, ಮುನ್ನಡೆ ಆಟಗಾರ ಅಲೆಕ್ಸಿಸ್ ಸಾಂಚೆಜ್, ರಕ್ಷಣಾ ವಿಭಾಗದಲ್ಲಿ ಗೊಂಜಲೊ ಜರಾ, ಗ್ಯಾರಿ ಮಾಡೆಲ್, ಯಡೋರ್ಡಾ ವರ್ಗಾಸ್ ಮುಂತಾದವರು ಚಿಲಿ ತಂಡದ ಪರ ಬಲಿಷ್ಠ ಹೋರಾಟ ನಡೆಸುವ ಆಟಗಾರರಾಗಿದ್ದಾರೆ.
ಮುಖಾಮುಖಿ


ತಂಡ    ಪಂದ್ಯ    ಜಯ    ಡ್ರಾ    ಸೋಲು    ಗೋಲುಪರ    ಗೋಲುವಿರುದ್ಧ
ಆಸ್ಟ್ರೇಲಿಯಾ    4    0    1    3    1    6
ಚಿಲಿ    4    3    1    0    6    1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement