ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ವಿಶ್ವಕಪ್ ಬಳಿಕ ಪಿರ್ಲೊ ವಿದಾಯ

ಇಟಲಿ ತಂಡದ ಭರವಸೆಯ ಆಟಗಾರ ಆ್ಯಂಡ್ರಿಯಾ ಪಿರ್ಲೊ ವಿಶ್ವಕಪ್ ...

Rashmi Kasaragodu
Updated On : 13 Jun 2014, 1:40 am

ಮಂಗಾರತಿಬಾ (ಬ್ರೆಜಿಲ್): ಇಟಲಿ ತಂಡದ ಭರವಸೆಯ ಆಟಗಾರ ಆ್ಯಂಡ್ರಿಯಾ ಪಿರ್ಲೊ ವಿಶ್ವಕಪ್ ಪಂದ್ಯಾವಳಿ ನಂತರ ಅಂತಾರಾಷ್ಟ್ರೀಯ ವೃತ್ತಿಗೆ ವಿದಾಯ ಹೇಳಲಿದ್ದಾರೆ.
ಸ್ವತಃ ಈ ವಿಷಯ ಖಚಿತಪಡಿಸಿರುವ 35ರ ಪಿರ್ಲೊ, ವಿಶ್ವಕಪ್ ಬಳಿಕ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ. 2006ರಲ್ಲಿ ಇಟಲಿ ತಂಡ ವಿಶ್ವಕಪ್ ಗೆದ್ದುಕೊಳ್ಳಲು ನೆರವಾಗಿದ್ದ ಆ್ಯಂಡ್ರಿಯಾ ಪಿರ್ಲೊ ಪಾಲಿಗೆ ಕಳೆದ 2010ರ ಆವೃತ್ತಿ ಮಾತ್ರ ಅತ್ಯಂತ ಕಹಿ ಎನಿಸಿತ್ತು. ಏಕೆಂದರೆ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಇಟಲಿ ತಂಡ ಮೊದಲ ಸುತ್ತಿನಿಂದಲೇ ನಿರ್ಗಮಿಸಿ ಅಚ್ಚರಿ ಮೂಡಿಸಿತ್ತು.
ಈ ಬಾರಿ ಇಟಲಿ ತಂಡ 'ಡಿ' ಗುಂಪಿನಲ್ಲಿ ಸೆಣಸಲಿದ್ದು, ತನ್ನ ಮೊದಲ ಪಂದ್ಯ ಆರಂಭವಾಗಲು ಇನ್ನೂ ಮೂರು ದಿನಗಳು ಉಳಿದಿರುವಂತೆಯೇ, ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ ಅವರು, ಯುವಕರಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶ ತಮ್ಮದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಇಟಲಿ ತಂಡದ ಪರ 109 ಪಂದ್ಯಗಳನ್ನಾಡಿರುವ ಅವರು ಸಾಕಷ್ಟು ಅನುಭವ ಹೊಂದಿರುವ ಆಟಗಾರರಾಗಿದ್ದಾರೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement