ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಬೆಲ್ಜಿಯಂಗೆ ಬದಲಿ ಆಟಗಾರರ ಬಲ

ಮೊದಲಾರ್ಧ ಪಂದ್ಯದಲ್ಲಿ ಶಿಸ್ತಿನ ಪ್ರದರ್ಶನ ತೋರಿದ್ದ ಅಲ್ಜೀರಿಯಾ ತಂಡವನ್ನು...

Mainashree
Updated On : 18 Jun 2014, 9:27 am

ಬೆಲೊ ಹಾರಿಜಂಟ್ (ಬ್ರೆಜಿಲ್): ಮೊದಲಾರ್ಧ ಪಂದ್ಯದಲ್ಲಿ ಶಿಸ್ತಿನ ಪ್ರದರ್ಶನ ತೋರಿದ್ದ ಅಲ್ಜೀರಿಯಾ ತಂಡವನ್ನು, ದ್ವಿತೀಯಾರ್ಧದಲ್ಲಿ ತನ್ನ ಸಮರ್ಥ ಹೋರಾಟದಿಂದ ನಿಯಂತ್ರಿಸುವ ಮೂಲಕ ವಿಶ್ವಕಪ್‌ನ 'ಎಚ್‌' ಗುಂಪಿನಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬೆಲ್ಜಿಂ 2-1 ಗೋಲುಗಳಿಂದ ಜಯ ಕಂಡುಕೊಂಡಿತು.
ಆರಂಭದಲ್ಲಿ ಪಾರಮ್ಯ ಮೆರೆದ ಅಲ್ಜೀರಿಯಾ ಪರವಾಗಿ ಪಂದ್ಯದ 24ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಅವಕಾಶದಲ್ಲಿ ಗೋಲು ದಾಖಲಿಸಿದ ಸೋಫಿಯಾನೆ ಫೆಗೌಲಿ ಅವರು 1-0 ಅಚ್ಚರಿಯ ಮುನ್ನಡೆ ತಂದುಕೊಟ್ಟರು.
ಆದರೆ, ಹಲವಾರು ಬದಲಾವಣೆಗಳನ್ನು ಮಾಡಲಾದ ನಂತರ 66ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಮರೌನೆ ಫೆಲ್ಲೈನಿ ಅವರು, 70ನೇ ನಿಮಿಷದಲ್ಲಿ ಕೆವಿನ್ ಡಿ ಬ್ರ್ಯುನೆ ಪಾಸ್ ಮಾಡಿದ ಚಂಡನ್ನು ತಲೆಯ ಮೂಲಕ ಗೋಲುಪೆಟ್ಟಿಗೆ ಸೇರಿಸಿದರು. ಇದು ಬೆಲ್ಜಿಯಂಗೆ ನಿರಾಳತೆ ಉಂಟುಮಾಡಿತು. ಆಗ ಉಭಯ ತಂಡಗಳು 1-1 ಗೋಲುಗಳ ಅಂತರದಿಂದ ಸಮಬಲ ಸಾಧಿಸಿದವು.   ನಂತರ ಪಂದ್ಯದ 80ನೇ ನಿಮಿಷದಲ್ಲಿ ಡ್ರೈಸ್ ಮಾರ್ಟೆನೆಸ್ ಗೋಲು ದಾಖಲಿಸುವಮೂಲಕ ಬೆಲ್ಜಿಂ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಮುನ್ನಡೆ ಪಡೆದುಕೊಂಡಿತು. ವಿಶೇಷವೆಂದರೆ, ಡ್ರೈಸ್ ಮಾರ್ಟೆನೆಸ್ ಸಹ 50ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಅಂಗಣಕ್ಕಿಳಿದಿದ್ದರು.
ವಿಶ್ವದ ಪ್ರಮುಖ ಆಟಗಾರರಾದ ಫೌಜಿ ಘೌಲಮ್, ಸಾಫಿರ್ ಟೈಡರ್ ಹಾಗೂ ನಬಿಲ್ ಬೆಂಟಾಲೆಬ್ ಅವರಂತಹ ಆಟಗಾರರನ್ನು ಹೊಂದಿದಾಗ್ಯೂ, ಬೆಲ್ಜಿಯಂ ಮೊದಲಾರ್ಧ ಪಂದ್ಯದಲ್ಲಿ ಒದ್ದಾಡಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಅಚ್ಚರಿಯ ಜಯ ಕಂಡಿತು.    ಬೆಲ್ಜಿಯಂಗೆ ಬಲ ತಂದ ಬದಲಾವಣೆ: ಪಂದ್ಯದ 50ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದಲ್ಲಿ ಬದಲಾವಣೆ ಮಾಡಿಕೊಂಡಿತು. ನೇಸರ್ ಚಂಡ್ಲಿ ಬದಲಾಗಿ ಡ್ರೈಸ್ ಮಾರ್ಟೆನೆಸ್ ಅಂಗಣಕ್ಕಿಳಿದರು. ನಂತರ 58ನೇ ನಿಮಿಷದಲ್ಲಿ ರೋಮೆಲು ಲೂಕಾಕು ಬದಲಾಗಿ, ಡಿವೋಕ್ ಓರಿಜಿ ಅವರು ಅಂಗಣಕ್ಕಿಳಿದರು. ಇದಾದ ನಂತರ 66ನೇ ನಿಮಿಷದಲ್ಲಿ ಬೆಲ್ಜಿಯಂ ತನ್ನ ಕೊನೆಯ ಬದಲಾವಣೆ ಮಾಡಿಕೊಂಡಿತು. ಮಾರ್ಕ್ ವಿಲ್ಮೋಟ್ಸ್ ಬದಲಾಗಿ ಮರೌನೆ ಫೆಲ್ಲೈನಿ ತಂಡ ಸೇರಿಕೊಂಡರು.
ಬದಲಿ ಆಟಗಾರರಾಗಿ ಬಂದ ಮರೌನೆ ಫೆಲ್ಲೈನಿ ಮತ್ತು ಡ್ರೈಸ್ ಮಾರ್ಟೆನೆಸ್ ಗೋಲು ಗಳಿಸುವ ಮೂಲಕ ತಂಡ ಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement