ಫಿಫಾ ವಿಶ್ವಕಪ್ 2014

ಹೋಂಡುರಾಸ್- ಈಕ್ವೆಡಾರ್ ಕದನ

ಲೆಕ್ಕಾಚಾರದಲ್ಲಿ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಹೆಚ್ಚೂಕಡಿಮೆ...

ಕ್ಯೂರಿಟಿಬಾ: ಲೆಕ್ಕಾಚಾರದಲ್ಲಿ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಹೆಚ್ಚೂಕಡಿಮೆ ಸಮಬಲ ಸಾಧಿಸಿರುವ ಹೋಂಡುರಾಸ್ ಮತ್ತು ಈಕ್ವೆಡಾರ್ ತಂಡಗಳು ಶುಕ್ರವಾರ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯದಲ್ಲಿ ಪರಸ್ಪರ ಹೋರಾಟ ನಡೆಸಲಿವೆ.
ಇದುವರೆಗೂ ಉಭಯ ತಂಡಗಳು 13 ಪಂದ್ಯಗಳನ್ನಾಡಿದ್ದು, ಅವೆಲ್ಲವೂ ಸೌಹಾರ್ದ ಪಂದ್ಯಗಳಾಗಿವೆ. ಇದರಲ್ಲಿ 8 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಉಳಿದ 5 ಪಂದ್ಯಗಳಲ್ಲಿ ಮೂರರಲ್ಲಿ ಈಕ್ವೆಡಾರ್ ಜಯ ಸಾಧಿಸಿದರೆ, ಎರಡು ಪಂದ್ಯಗಳಲ್ಲಿ ಹೋಂಡುರಾಸ್ ಜಯ ಕಂಡುಕೊಂಡಿದೆ. ಹೀಗಾಗಿ, ಈ ಹಿಂದಿನ ದಾಖಲೆಗಳ ಪ್ರಕಾರ ಈಕ್ವೆಡಾರ್ ಕೊಂಚ ಪ್ರಬಲ ತಂಡವೆನಿಸಿದೆ. ಕಳೆದ ನವೆಂಬರ್‌ನಲ್ಲಿ ಅಮೆರಿಕದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 2-2 ಗೋಲುಗಳಿಂದ ಡ್ರಾ ಸಾಧಿಸಿದ್ದವು. ಹೀಗಾಗಿ ಉಭಯ ತಂಡಗಳು ಸಮಬಲದ ಶಕ್ತಿಯನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಈ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಿಲಿದೆ ಎಂಬ ಕಾತರಲ್ಲಿದ್ದಾರೆ, ದಕ್ಷಿಣ ಆಮೆರಿಕ ದೇಶವಾಗಿರುವ ಈಕ್ವೆಡಾರ್ ಮತ್ತು ಕೇಂದ್ರ ಅಮೆರಿಕ ರಾಷ್ಟ್ರವಾಗಿರುವ ಹೋಂಡುರಾಸ್‌ನ ಅಭಿಮಾನಿಗಳು.
ಈ ಮೊದಲು ಆಡಿದ ಪಂದ್ಯದಲ್ಲಿ ಉಭಯ ತಂಡಗಳು ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸ್ಥಿತಿಯನ್ನು ತಲುಪಿವೆ.
ಈಕ್ವೆಡಾರ್-ಹೋಂಡುರಾಸ್ (ಗುಂಪು-ಇ) ಪಂದ್ಯ ಆರಂಭ: 03.30
26    ರ್ಯಾಂಕ್    33
13    ಪಂದ್ಯ    13
03    ಜಯ    0202    ಸೋಲು    0308    ಡ್ರಾ    0814    ಗೋಲು    13

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ