ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

8ರ ಘಟ್ಟದಲ್ಲಿ ಸೋತ ಸೈನಾ

Vishwanath S
Updated On : 21 Jun 2014, 2:09 am

ಜಕಾರ್ತ: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಇಂಡೋನೇಷ್ಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ಫೈನಲ್ಗೇ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.8ನೇ ಶ್ರೇಯಾಂಕ ಪಡೆದಿದ್ದ ಸೈನಾ, ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿ ಚೀನಾದ ಲೀ ಕ್ಸೂರೀ ವಿರುದ್ಧ 20-22, 15-21 ನೇರ ಸೆಟ್ಗಳಿಂದ ಸೋಲನುಭವಿಸಿದರು. ಈ ಜಯದೊಂದಿಗೆ ಒಲಿಂಪಿಕ್ಸ್ ಚಾಂಪಿಯನ್ ಲೀ ಅವರು ಸೈನಾ ವಿರುದ್ಧ ಆಡಿದ 9 ಪಂದ್ಯಗಳಲ್ಲಿ ಒಟ್ಟು 7ರಲ್ಲಿ ಜಯ ಕಂಡುಕೊಂಡರು.

17ರ ವಿಶ್ವಕಪ್ಗೆ ಫಿಫಾ ಹಣಕಾಸು ನೆರವು
ರಿಯೊ ಡಿ ಜನೈರೋ:
ಭಾರತದಲ್ಲಿ 2017ರಲ್ಲಿ ನಡೆಯಲಿರುವ 17 ವರ್ಷದೊಳಗಿನ ಫುಟ್ಬಾಲ್ ಪಂದ್ಯಾವಳಿಯ ಯಶಸ್ಸಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಮಾತ್ರ ಕಷ್ಟಪಡುತ್ತಿಲ್ಲ. ಪಂದ್ಯಾವಳಿಯ ಹಿತದೃಷ್ಟಿಯಿಂದ ಫಿಫಾ 38 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು # 2288550000) ಹಣಕಾಸು ನೆರವು ನೀಡಿದೆ.
ಭಾರತದಲ್ಲಿ ನಡೆಯಲಿರುವ ಕಿರಿಯರ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲು ಎಲ್ಲ ರೀತಿಯ ನೆರವು ನೀಡಲು ಫಿಫಾ ಅಧ್ಯಕ್ಷರಾದ ಸೆಪ್ ಬ್ಲಾಟರ್ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು, ಬ್ರೆಜಿಲ್ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ನಡೆದ ಫಿಫಾ ಸಭೆಯಲ್ಲಿ ಭಾಗವಹಿಸಿದ್ದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement