ಕೊರಿಯಾಗೆ ನಾಕೌಟ್ ಕನಸು
ಪೊರ್ಟೊ ಅಲೆಗ್ರೆ: ಆರಂಭಿಕ ಪಂದ್ಯದಲ್ಲಿ ಡ್ರಾ ಸಾಧಿಸಿ, ಈಗ ನಾಕೌಟ್ ಹಂತಕ್ಕೆ ಪ್ರವೇಶಿಸುವ ಕನಸು ಕಾಣುತ್ತಿರುವ ಕೊರಿಯಾ ರಿಪಬ್ಲಿಕ್ ತಂಡಕ್ಕೆ ಉತ್ತಮ ಅವಕಾಶ ಎದುರಾಗಿದೆ. ಕಾರಣ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕೊರಿಯಾ, ಸೋಲಿನ ಸುಳಿಯಲ್ಲಿ ನಲುಗಿರುವ ಅಲ್ಜೀರಿಯಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆಲವು ದಾಖಲಿಸುವ ಲೆಕ್ಕಾಚಾರದಲ್ಲಿದೆ. ಅಲ್ಜೀರಿಯಾ ತಂಡ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ತೋರಿದ್ದು, ಕಳೆದ ಏಳು ವಿಶ್ವಕಪ್ ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ಹಾಗಾಗಿ ಅಲ್ಜೀರಿಯಾ ತಂಡ ಈ ಸೋಲಿನ ಸರಪಳಿಯಿಂದ ಹೊರ ಬರುವ ಒತ್ತಡದಲ್ಲಿದೆ. 1982ರಲ್ಲಿ ಜರ್ಮನಿ ವಿರುದ್ಧ ಗೆಲವು ದಾಖಲಿಸಿದ್ದ ಅಲ್ಜೀರಿಯಾ ನಂತರ ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕೊರಿಯಾ ವಿರುದ್ಧ ಅಲ್ಜೀರಿಯಾ ಉತ್ತಮ ರ್ಯಾಂಕಿಂಗ್ ಹೊಂದಿದ್ದರೂ, ಕೊರಿಯಾ ವಿರುದ್ಧ ಈ ಹಿಂದೆ ಒಂದು ಬಾರಿ ಕಾದಾಟ ನಡೆಸಿದ್ದು, ಆ ಪಂದ್ಯದಲ್ಲೂ ಸೋಲನುಭವಿಸಿದೆ. ಹಾಗಾಗಿ ಈ ಪಂದ್ಯದಲ್ಲಿ ಅಲ್ಜೀರಿಯಾ ಆಟಗಾರರ ಮನೋಬಲ ಕುಗ್ಗಿದೆ.
ಇನ್ನು ಕೊರಿಯಾಗೆ ನಾಕೌಟ್ ಆಸೆ ಜೀವಂತವಾಗಿ ಉಳಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದ್ದು, ಯಾವರೀತಿ ಇದರ ಲಾಭ ಪಡೆಯಲಿದೆ ಎಂಬುದನ್ನು ಕಾದುನೋಡಬೇಕು. ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದು, ಕೊರಿಯಾ ಆತ್ಮವಿಶ್ವಾಸ ಹೆಚ್ಚಿದೆ.
ಕೊರಿಯಾ- ಅಲ್ಜೀರಿಯಾ
(ಗುಂಪು-ಎಚ್)
ಪಂದ್ಯ ಆರಂಭ:
ಇಂದು ಮಧ್ಯರಾತ್ರಿ 12.30
57-ರ್ಯಾಂಕ್-22
01-ಪಂದ್ಯ-01
01-ಜಯ-00
00-ಸೋಲು-01
02-ಗೋಲು-00