ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಮೆಸ್ಸಿ ಮ್ಯಾಜಿಕ್: ಅರ್ಜೆಂಟೀನಾ ಇನ್ ನಾಕೌಟ್

ಇರಾನ್ ತಂಡದ ಗೋಲ್ ಕೀಪರ್ ವಂಚಿಸಿ...

Vishwanath S
Updated On : 22 Jun 2014, 12:53 pm

ಬೆಲೊ ಹಾರಿಜಂಟ್ (ಬ್ರೆಜಿಲ್): ಇರಾನ್ ತಂಡದ ಗೋಲ್ ಕೀಪರ್ ವಂಚಿಸಿ ಮಿಂಚಿನ ಗೋಲು ದಾಖಲಿಸಿದ ಲಯೋನೆಲ್ ಮೆಸ್ಸಿ, ಕೊನೆಗೂ ತಂಡ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಹೀಗಾಗಿ, ಪಂದ್ಯದ ಅಂತ್ಯದವರೆಗೂ ಇರಾನ್ ನೀಡಿದ ಸವಾಲನ್ನು ಎದುರಿಸಲು ಸೆಣಸಾಡಿದ ಅರ್ಜೆಂಟೀನಾ ಸಂಭ್ರಮ ಹೆಚ್ಚುವರಿ ಸಮಯದಲ್ಲಿ ಮುಗಿಲು ಮುಟ್ಟಲು ಕಾರಣವಾಯಿತು.
ಅದು ಸ್ಟಾರ್ ಆಟಗಾರರನ್ನು ಹೊಂದಿದ್ದರೂ, ಪಂದ್ಯದಲ್ಲಿ ಗೋಲು ದಾಖಲಿಸಲು ದೊರಕಿದ್ದ ಹಲವಾರು ಅವಕಾಶಗಳಲ್ಲಿ ಒದ್ದಾಡಿತ್ತು. ಅಲ್ಲದೆ, ತಮಗಿಂತ ಕಡಿಮೆ ರ್ಯಾಂಕಿಂಗ್ ಹೊಂದಿದ ತಂಡದ ವಿರುದ್ಧ ಗೋಲು ದಾಖಲಿಸಲಾಗದ ತಂಡದ ಆಟಗಾರರು ಬಳಲಿ ಬೆಂದಿದ್ದರು. ಆದರೆ, 92ನೇ ನಿಮಿಷದಲ್ಲಿ ಮೆಸ್ಸಿ ಆ ನೋವನ್ನೆಲ್ಲ ಮರೆಯುವಂತೆ ಮಾಡಿದರು. ಕಾರಣ ಅರ್ಜೆಂಟೀನಾ ತಂಡ ಇರಾನ್ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದ ಮೆಸ್ಸಿ, ತಮ್ಮ ತಂಡ ನಾಕೌಟ್ ಹಂತಕ್ಕೆ ಪ್ರವೇಶಿಸಲು ಕಾರಣರಾದರು. ಬಲಿಷ್ಠ ಅರ್ಜೆಂಟೀನಾ ವಿರುದ್ಧ ತಕ್ಕ ಪ್ರದರ್ಶನ ನೀಡಿದ್ದ ಇರಾನ್ ತಂಡದ ಪರ ಗೋಲ್ ಕೀಪರ್ ಪಂದ್ಯದಲ್ಲಿ ಹಲವಾರು ಬಾರಿ ಗೋಲು ತಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಹೆಚ್ಚುವರಿ ಸಮಯದಲ್ಲಿ ಅವರ ಕಣ್ತಪ್ಪಿಸುವಲ್ಲಿ ಮೆಸ್ಸಿ ಯಶಸ್ವಿಯಾದರು.
ಪಂದ್ಯದಲ್ಲಿ ಹೆಚ್ಚಿನ ಸಮಯ ಅರ್ಜೆಂಟೀನಾ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಆದರೆ, ವೇಗದ ಕೊರತೆಯಿಂದ ಅದಕ್ಕೆ ಗೋಲು ದಾಖಲಿಸಲು ಸಾಧ್ಯವಾಗಿರಲಿಲ್ಲ.
ಎದುರಾಳಿಯನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾದ ಇರಾನ್ ತಂಡ ಮೊದಲಾರ್ಧ ಪಂದ್ಯದಲ್ಲಿ ಗೋಲು ದಾಖಲಿಸಲು ಅವಕಾಶ ನೀಡಲಿಲ್ಲ.    ಮೊದಲಾರ್ಧ ಪಂದ್ಯದಲ್ಲಿ ಗೋಲು ದಾಖಲಿಸಲು ದೊರಕಿದ್ದ ಎರಡು ಅವಕಾಶಗಳಲ್ಲಿ ವಿಶ್ವದ ಖ್ಯಾತ ಫುಟ್ಬಾಲ್ ತಾರೆ ಲಯೋನೆಲ್ ಮೆಸ್ಸಿ ಮತ್ತು ಗೊಂಜಾಲೋ ಹೀಗುಯನ್ ಅವರಂತಹ ಆಟಗಾರರು ಇರಾನ್ ಗೋಡೆಯನ್ನು ಭೇದಿಸುವಲ್ಲಿ ವೈಫಲ್ಯ ಕಂಡರು.
ಅಲ್ಲದೆ, ಇರಾನ್ ಗೋಲು ದಾಖಲಿಸಲು ತಾನೂ ಕೆಲ ಅವಕಾಶಗಳನ್ನು ಸೃಷ್ಟಿಮಾಡಿಕೊಂಡು, ನೆರೆದಿದ್ದ ತನ್ನ ಅಭಿಮಾನಿಗಳಲ್ಲಿ ಪುಳಕ ಮೂಡಿಸಿತು. ಮೊದಲಾರ್ಧದ ಅಂತ್ಯದಲ್ಲಿ ಇರಾನ್ನ ಜಲಾಲ್ ಹುಸೇನಿ ಅವರು ಅದ್ಭುತ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಆದರೆ, ದೊರಕಿದ ಅವಕಾಶದಲ್ಲಿ ಗೋಲು ದಾಖಲಿಸಲು     ಅವರೂ ಸಫಲರಾಗಲಿಲ್ಲ.
ನಂತರ ದ್ವಿತೀಯಾರ್ಧ ಪಂದ್ಯದ 53ನೇ ನಿಮಿಷದಲ್ಲೂ ಇರಾನ್ ಗೋಲು ದಾಖಲಿಸುವ ಸುವರ್ಣಾವಕಾಶವನ್ನು ಹೊಂದಿತ್ತು. ಗೋಲ್ ದಾಖಲಿಸಲು ವೈಫಲ್ಯರಾದ, ರೇಜಾ ಗೂಚೆನ್ನೆಜಹಾಡ್ ಜೀವನದಲ್ಲಿ ಏನೋ ಕಳೆದುಕೊಂಡಷ್ಟು ಬೇಸರ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement