ಬೆಲೊ ಹಾರಿಜಂಟ್: ಅರ್ಜೆಂಟೀನಾ ತಂಡದ ಆಟಗಾರರ ಬಸ್ ಬಳಿ ಭದ್ರತೆಯನ್ನು ಉಲ್ಲಘಿಸಿದ ಅಭಿಮಾಗಳನ್ನು ಚದುರಿಸಲು ಬ್ರೆಜಿಲ್ ಪೊಲೀಸರು ಶನಿವಾರ ಲಾಠಿ ಪ್ರಹಾರ ನಡೆಸಿದ್ದಾರೆ.
ಈ ಘಟನೆಯಲ್ಲಿ ಬ್ರೆಜಿಲ್ನ ನಾಲ್ವರು, ಅರ್ಜೆಂಟೀನಾದ ಮೂವರು ಹಾಗೂ ಕೊಲಂಬಿಯಾದ ಓರ್ವ ಅಭಿಮಾನಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೇನಾ ಪೊಲೀಸರು ತಿಳಿಸಿದ್ದಾರೆ. ಆಟಗಾರರನ್ನು ಕರೆದೊಯ್ಯಲು ಸ್ಟೇಡಿಯಂನ ಬಳಿ ಬಸ್ ನಿಲ್ಲಸಿದ್ದಾಗ, ನಿಯಮಗಳನ್ನು ಉಲ್ಲಂಘಿಸಿದ ಅಭಿಮಾನಿಗಳನ್ನು ಚದಿರಸಲು ಪೊಲೀಸರು ಹರಿತವಲ್ಲದ ಆಯುಧಗಳನ್ನು ಬಳಿಸಿದ್ದಾರೆ.
ಆದರೆ, ಯಾವ ರೀತಿಯ ಆಯುಧಗಳನ್ನು ಬಳಿಸಿದರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ, ಬ್ರೆಜಿಲ್ ಪೊಲೀಸರು ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ರಬ್ಬರ್ ಬುಲೆಟ್ಗಳು, ಅಶ್ರು ವಾಯು ಹಾಗೂ ಸ್ಟನ್ ಗ್ರೆನೇಡ್ಗಳನ್ನು ಬಳಸುತ್ತಾರೆ.