ಆಂಗ್ಲರಿಗೆ ರಾಬ್ಸನ್ ರಕ್ಷಣೆ
ಲೀಡ್ಸ್: ಆರಂಭಿಕ ಬ್ಯಾಟ್ಸ್‌ಮನ್ ಸ್ಯಾಮ್ ರಾಬ್‌ಸನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಇಲ್ಲಿನ ಹೆಡಿಂಗ್ಲಿಯಲ್ಲಿ ಶನಿವಾರ ನಡೆದ ಪಂದ್ಯದ ಎರಡನೇ ದಿನ 67 ರನ್‌ಗಳ ಮುನ್ನಡೆ ಸಾಧಿಸಿದೆ. ಶುಕ್ರವಾರ ದಿನದಾಟದಲ್ಲಿ ಶ್ರೀಲಂಕಾ ತಂಡವನ್ನು 257 ರನ್‌ಗಳಿಗೆ ಕಟ್ಟಿ ಹಾಕಿದ ನಂತರ ಬ್ಯಾಟಿಂಗ್ ಆಂಭಿಸಿದ ಇಂಗ್ಲೆಂಡ್‌ತಂಡ ಉತ್ತಮ ಆರಂಭ ಪಡೆಯಿತು. ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 320 ರನ್ ದಾಖಲಿಸುವ ಮೂಲಕ ಇನಿಂಗ್ಸ್ ಮುನ್ನಡೆ ಪಡೆಯಿತು.
ಇಂಗ್ಲೆಂಡ್ ತಂಡದ ಪರ ಸ್ಯಾಮ್ ರಾಬ್‌ಸನ್ (127) ಶತಕ ದಾಖಲಿಸಿದರೆ, ಗ್ಯಾರಿ ಬ್ಯಾಲೆನ್ಸ್ (74) ಹಾಗೂ ಇಯಾನ್ ಬೆಲ್ (64) ಅರ್ಧಶತಕ ದಾಖಲಿಸಿದರು. ಈ ಮೂವರ ವಿಕೆಟ್ ನಂತರ ಇಂಗ್ಲೆಂಡ್ ತಂಡ ಉತ್ತಮ ಜತೆಯಾಟ ಪಡೆಯುವಲ್ಲಿ ವಿಫಲವಾಗಿದೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್ 257
ಇಂಗ್ಲೆಂಡ್ ಮೊದಲ ಇನಿಂಗ್ಸ್ 6 ವಿಕೆಟ್‌ಗೆ 320
ರಾಬ್‌ಸನ್ 127, ಗ್ಯಾರಿ ಬ್ಯಾಲೆನ್ಸ್ 74, ಇಯಾನ್ ಬೆಲ್ 64, ಮ್ಯಾಥ್ಯೂಸ್ 44ಕ್ಕೆ4