ಕೆಮರೂನ್ ಮೇಲೆ ಬ್ರೆಜಿಲ್ ಕಣ್ಣು
ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ನಾಕೌಟ್ ಹಂತಕ್ಕೆ ಪ್ರವೇಶಿಸಿರುವ ಬ್ರೆಜಿಲ್, ಈಗ ದುರ್ಬಲ...
ಬ್ರಾಜಿಲ್ಲಾ: ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ನಾಕೌಟ್ ಹಂತಕ್ಕೆ ಪ್ರವೇಶಿಸಿರುವ ಬ್ರೆಜಿಲ್, ಈಗ ದುರ್ಬಲ ಕೆಮರೂನ್ ತಂಡವನ್ನು ಎ ಗುಂಪಿನ ತನ್ನ ಕಡೇಯ ಪಂದ್ಯದಲ್ಲಿ ಎದುರಿಸುತ್ತಿದ್ದು, ತನ್ನ ಗೆಲವಿನ ಯಾತ್ರೆ ಮುಂದುವರಿಸಲು ಸಜ್ಜಾಗಿದೆ.
ರಾಜಧಾನಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಬ್ರೆಜಿಲ್ ತಂಡ ಗೆಲವಿನ ಫೇವರಿಟ್ ಆಗಿದೆ. ಅಲ್ಲದೆ ಬ್ರೆಜಿಲ್ ತಂಡಕ್ಕೆ ಇದು 100ನೇ ವಿಶ್ವಕಪ್ ಪಂದ್ಯವಾಗಿದ್ದು, ತಂಡ ಗೆಲವು ದಾಖಲಿಸಲೇಬೇಕೆಂಬ ಪಣ ತೊಟ್ಟಿದೆ.
ತಂಡದ ಸ್ಟಾರ್ ಆಟಗಾರ ನೇಮಾರ್ ಸಹ ಉತ್ತಮ ಲಯದಲ್ಲಿದ್ದು, ತಂಡದ ಸಂಘಟಿತ ಪ್ರದರ್ಶನ ಯಶಸ್ಸಿನ ಗುಟ್ಟಾಗಿದೆ.
ಇದುವರೆಗೂ ಉಭಯ ತಂಡಗಳು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಬ್ರೆಜಿಲ್ 3ರಲ್ಲಿ ಗೆಲವು ದಾಖಲಿಸಿದರೆ, 1ರಲ್ಲಿ ಸೋಲನುಭವಿಸಿದೆ. ಅಲ್ಲದೆ, 1994ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಬ್ರೆಜಿಲ್ 3-0 ಗೋಲುಗಳ ಅಂತರದಿಂದ ಗೆಲವು ದಾಖಲಿಸಿತ್ತು.
ಇನ್ನು ಆಡಿರುವ ನಾಲ್ಕು ಪಂದ್ಯಗಳಿಂದ ಬ್ರೆಜಿಲ್ 7 ಗೋಲು ದಾಖಲಿಸಿದರೆ, ಕೆಮರೂನ್ ತಂಡ ಕೇವಲ 1 ಗೋಲು ದಾಖಲಿಸಿದೆ.
ಬ್ರೆಜಿಲ್ ತಂಡ ಗೆಲವಿನ ಅಲೆಯಲ್ಲಿದ್ದರೆ, ಕೆಮರೂನ್ ಸೋಲಿನಿಂದ ಕಂಗೆಟ್ಟಿದೆ. ಹಾಗಾಗಿ ಕೆಮರೂನ್ ವಿರುದ್ಧ ಗೆಲವು ದಾಖಲಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು, ನಾಕೌಟ್ ಹಂತಕ್ಕೆ ಪ್ರವೇಶಿಸಲು ಬ್ರೆಜಿಲ್ ಲೆಕ್ಕಾಚಾರ ಹಾಕಿದೆ.