ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ತಾರತಮ್ಯ: ಫಿಫಾ ವಿರುದ್ಧ ಕಿಡಿ ಕಾರಿದ ಮರಡೋನಾ

ಇಟಲಿ ವಿರುದ್ಧ ಕೋಸ್ಟ ರಿಕಾ ತಂಡ ಗೆಲವು ದಾಖಲಿಸಿದ ನಂತರ ಕೋಸ್ಟ ರಿಕಾದ...

Mainashree
Updated On : 22 Jun 2014, 10:55 am

ಬ್ರೆಜಿಲ್: ಇಟಲಿ ವಿರುದ್ಧ ಕೋಸ್ಟ ರಿಕಾ ತಂಡ ಗೆಲವು ದಾಖಲಿಸಿದ ನಂತರ ಕೋಸ್ಟ ರಿಕಾದ ಏಳು ಆಟಗಾರರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದ ಫಿಫಾ ಕ್ರಮವನ್ನು ಫುಟ್ಬಾಲ್ ದಂತಕತೆ ಡಿಗೊ ಮರಡೋನಾ ಟೀಕಿಸಿದ್ದಾರೆ.
ಫಿಫಾ ಜನಾಂಗೀಯ ನಿಂದನೆ ಮಾಡಿದೆ. ಕೋಸ್ಟ ರಿಕಾ ತಂಡ ಇಟಲಿ ವಿರುದ್ಧ ಗೆಲವು ದಾಖಲಿಸಿದ ನಂತರ ಏಳು ಕೋಸ್ಟ ರಿಕಾ ಆಟಗಾರರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದ್ದು, ಏಕೆ ಏಳು ಇಟಲಿ ಆಟಗಾರರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೋಸ್ಟ ರಿಕಾ ತಂಡ ಗೆಲವು ದಾಖಲಿಸಿದ್ದು, ಹಾಗೂ ಇಟಲಿ ಸೋಲನುಭವಿಸಿರುವುದರಿಂದ ಸಾಕಷ್ಟು ಜನರಿಗೆ ಬೇಸರವಾಗಿದೆ. ಅಲ್ಲದೆ, ಪ್ರಾಯೋಜಕರು ತಾವು ಭರವಸೆ ನೀಡಿದಷ್ಟು ಹಣ ಪಾವತಿಸುವುದಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ. ಕೋಸ್ಟ ರಿಕಾ ತಂಡ ತನ್ನ ಗುಂಪಿನಲ್ಲಿ ಮೂರು ಚಾಂಪಿಯನ್ ತಂಡಗಳನ್ನು ಹೊಂದಿದ್ದರೂ, ಉತ್ತಮ ಪ್ರದರ್ಶನದ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ ಎಂದು ಅಭಿಪ್ರಾಯಪಟ್ಟರು. ಮರಡೋನಾ ಜತೆಗೆ ಕೋಸ್ಟ ರಿಕಾದ ಕೋಚ್ ಜಾರ್ಜ್ ಲೂಯಿಸ್ ಪಿಂಟೊ ಹಾಗೂ ಕೋಸ್ಟ ರಿಕಾ ಫುಟ್ಬಾಲ್ ಫೆಡರೇಷನ್ ಸಹ ಈ ಕ್ರಮವನ್ನು ಜನಾಂಗೀಯ ನಿಂದನೆ ಎಂದು ಆರೋಪಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement