ಇಂಗ್ಲೆಂಡ್ಗೆ ಲ್ಯಾಂಪರ್ಡ್ ಸಾರಥ್ಯ
ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೀನಾಯ ಪ್ರದರ್ಶನದ ಮೂಲಕ ಟೂರ್ನಿಯಿಂದ ಹೊರ...
ಬೆಲೊ ಹೊರಿಜೊಂಟೆ (ಬ್ರೆಜಿಲ್): ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೀನಾಯ ಪ್ರದರ್ಶನದ ಮೂಲಕ ಟೂರ್ನಿಯಿಂದ ಹೊರ ಬಿದ್ದಿರುವ ಇಂಗ್ಲೆಂಡ್ ತಂಡಕ್ಕೆ ಹಿರಿಯ ಆಟಗಾರ ಫ್ರ್ಯಾಂಕ್ ಲಾಂಪರ್ಡ್ ನಾಯಕತ್ವ ವಹಿಸಲಿದ್ದಾರೆ.
ತಂಡ ಹಿನಾಯ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ನಾಯಕ ಸ್ಟೀವನ್ ಗೆರಾರ್ಡ್ ಮಂಗಳವಾರ ನಡೆಯಲಿರುವ ಕೋಸ್ಟ ರಿಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಅಲ್ಲದೆ ತಂಡದಲ್ಲಿನ ಇತರೆ ಆಟಗಾರರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ತಂಡದ ಸಾರಥ್ಯವನ್ನು ಫ್ರ್ಯಾಂಕ್ ಲ್ಯಾಂಪರ್ಡ್ ಹೆಗಲಿಗೆ ವಹಿಸಲಾಗಿದೆ. ಹಿರಿಯ ಆಟಗಾರರಾಗಿರುವ ಲ್ಯಾಂಪರ್ಡ್ ಹಾಗೂ ಗೆರಾರ್ಡ್ ಇಬ್ಬರೂ ಟೂರ್ನಿಯ ನಂತರ ವಿದಾಯ ಹೇಳುವ ಸಾಧ್ಯತೆಗಳಿವೆ.