ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಗೆದ್ದರಷ್ಟೇ ಜಪಾನ್ ಆಸೆ ಜೀವಂತ

ಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು, ನಾಕೌಟ್ ಸುತ್ತಿಗೆ ಪ್ರವೇಶಿಸುವ ಆಸೆ...

ಅಮೆರಿಕಾದ ಅಭಿಮಾನಿಯೊಬ್ಬಳು ವಿಶ್ವಕಪ್ ಫೈನಲ್‌ನಲ್ಲಿ ಬ್ರೆಜಿಲ್ 2-1 ಗೋಲುಗಳ ಅಂತರದಲ್ಲಿ ಅಮೆರಿಕಾ ವಿರುದ್ಧ ಗೆಲವು ದಾಖಲಿಸಲಿದೆ ಎಂದು ಬರೆದು ಪ್ರದರ್ಶಿಸುತ್ತಿರುವುದು.
Mainashree
Updated On : 23 Jun 2014, 9:05 am

ಕ್ಯೂಬಾ: ಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು, ನಾಕೌಟ್ ಸುತ್ತಿಗೆ ಪ್ರವೇಶಿಸುವ ಆಸೆ ಜೀವಂತವಾಗಿರಿಸಲು, ಜಪಾನ್ ತಮ್ಮ ಕಡೇಯ ಗುಂಪು ಹಂತದ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಗೆಲವು ದಾಖಲಿಸಲೇಬೇಕಾದ ಅನಿವಾರ್ಯತೆಯಲ್ಲಿದೆ. ಮಂಗಳವಾರ ಮಧ್ಯರಾತ್ರಿ ಇಲ್ಲಿನ ಅರೆನಾ ಪಂಟಾನಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸಿ ಗುಂಪಿನ ಪಂದ್ಯದಲ್ಲಿ ಜಪಾನ್ ತಂಡ, ಈಗಾಗಲೇ ಅಗ್ರಸ್ಥಾನ ಪಡೆದು ಪ್ರಿಕ್ವಾರ್ಟರ್‌ಫೈನಲ್ ಸುತ್ತಿಗೆ ಪ್ರವೇಶಿಸಿರುವ ಕೊಲಂಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಕೊಲಂಬಿಯಾ ತಂಡ ಗೆಲವಿನ ಫೇವರಿಟ್ ಎನ್ನಬಹುದು.  ಕೊಲಂಬಿಯಾ ಉತ್ತಮ ಲಯದಲ್ಲಿದ್ದು, ಆಡಿರುವ ಎರಡೂ ಪಂದ್ಯಗಳಲ್ಲೂ ಗೆಲವು ದಾಖಲಿಸುವ ಮೂಲಕ ಆತ್ಮ ವಿಶ್ವಾಸದಲ್ಲಿದೆ.
ಜಪಾನ್ ತಲಾ ಒಂದು ಡ್ರಾ ಮತ್ತು ಸೋಲಿನ ಫಲಿತಾಂಶ ಪಡೆದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement