ಕಳೆದ ಬಾರಿಯ ಕಹಿ ನೆನಪಲ್ಲಿ ಸ್ವಿಸ್
ಹರಿಣಗಳ ನಾಡಲ್ಲಿ ನಡೆದ ಕಳೆದ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಲೀಗ್ ಹತದಲ್ಲಿ...
ಮಾನವಾಸ್ (ಬ್ರೆಜಿಲ್): ಹರಿಣಗಳ ನಾಡಲ್ಲಿ ನಡೆದ ಕಳೆದ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಲೀಗ್ ಹತದಲ್ಲಿ ನಾಟಕೀಯವಾಗಿ, ನಾಕೌಟ್ ಹಂತ ತಲುಪುವುದರಿಂದ ವಂಚಿತವಾಗಿದ್ದ ಸ್ವಿಜರ್ಲೆಂಡ್, ಈಗ ಅದೇ ರೀತಿಯ ಪರಿಸ್ಥಿತಿಯಲ್ಲಿದೆ.
ದುರ್ಬಲ ಹೋಂಡುರಾಸ್ ವಿರುದ್ಧ ಬುಧವಾರ ಮಧ್ಯ ರಾತ್ರಿ ನಡೆಯಲಿರುವ ಪಂದ್ಯದಲ್ಲಿ, ಕಳೆದ ಬಾರಿ ಕಂಡ ವೈಫಲ್ಯ ಮರುಕಳಿಸದಂತೆ ನೋಡಿಕೊಳ್ಳಲು ಜಾಗೃತವಾಗಿದೆ. ನಾಲ್ಕು ವರ್ಷಗಳ ಹಿಂದೆ ನಡೆದ ಪಂದ್ಯಾವಳಿಯಲ್ಲಿ ಸ್ವಿಸ್ ಇದೇ ರೀತಿಯ ಪರಿಸ್ಥಿತಿಯಲ್ಲಿ ಸಿಲುಕೊಂಡಿತ್ತು. ಆಗ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ದುರ್ಬಲ ಕೇಂದ್ರ ಅಮೆರಿಕಾ ವಿರುದ್ಧ ಡ್ರಾ ಸಾಧಿಸುವ ಮೂಲಕ ನಾಕೌಟ್ ಹಂತ ತಲುಪುವುದರಿಂದ ವಂಚಿತವಾಗಿತ್ತು.
ಅಲ್ಲದೆ, ಒಟ್ಮಾರ್ ಹಿಜ್‌ಫೆಲ್ಡ್ ಅವರ ಗರಡಿಯಲ್ಲಿ ಪಳಗಿರುವ ಸ್ವಿಜರ್ಲೆಂಡ್, ಫಿಫಾ ರ್ಯಾಂಕಿಂಗ್‌ನಲ್ಲೂ 6ನೇ ಸ್ಥಾನದಲ್ಲಿದೆ. ಹೀಗಾಗಿ 'ಇ' ಗುಂಪಿನಲ್ಲಿರುವ ಸ್ವೀಸ್ ತಂಡದ ಪರ ಅಪಾರ ನಿರೀಕ್ಷೆಯನ್ನು ಹೊಂದಲಾಗಿದೆ. ಆದರೆ, ಕಳೆದ ವಾರ ಫ್ರಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 5-2 ಗೋಲುಗಳಿಂದ ಸೋಲನುಭವಿಸಿದಾಗ, ತಂಡದ ವಿಶ್ವಾಸ ಕೊಂಚ ಕುಗ್ಗಿದೆ. ಏತನ್ಮಧ್ಯೆ, ಇನ್ನೊಂದೆಡೆ ತನ್ನ 32 ವರ್ಷ ವಿಶ್ವಕಪ್ ಇತಿಹಾಸದಲ್ಲಿ ಈಕ್ವೆಡಾರ್ ವಿರುದ್ಧ 2-1ರಿಂದ ಸೋತರೂ ಒಂದು ಗೋಲು ದಾಖಲಿಸುವ ಮೂಲಕ ಹೊಂಡುರಾಸ್ ವಿಶ್ವಾಸ ಗಳಿಸಿಕೊಂಡಿದೆ. 'ಯಾರು ಬೇಕಾದರೂ ದೊಡ್ಡ ಕನಸು ಕಾಣಬಹುದು. ನಾವು ಹೋಂಡುರಾಸ್ ವಿರುದ್ಧ ಗೆಲ್ಲಬೇಕಾದರೆ, ಕೊಂಚ ಕಠಿಣ ಅಭ್ಯಾಸ ನಡೆಸಬೇಕಾಗಿದೆ' ಎಂದು ಸ್ವಿಜರ್ಲೆಂಡ್ ಮಿಡ್‌ಫೀಲ್ಡರ್ ಬ್ಲೆರಿಮ್ ಜೇಮೈಲಿ ತಿಳಿಸಿದ್ದಾರೆ.
ಸ್ವಿಜರ್ಲೆಂಡ್-ಹೋಂಡುರಾಸ್(ಇ- ಗುಂಪು)
ಪಂದ್ಯ ಆರಂಭ:
ರಾತ್ರಿ 1.30 ಗಂಟೆ
06 ರ್ಯಾಂಕ್ 33
ಮುಖಾಮುಖಿ
1 ಪಂದ್ಯ 11 ಡ್ರಾ 1
0 ಗೋಲು ಪರ 0