ಕುಸಿದ ವ್ಯಾಪಾರೋದ್ಯಮ
ಫುಟ್ಬಾಲ್ ಜ್ವರ ಹೆಚ್ಚಿರುವ ರಾಷ್ಟ್ರಗಳಲ್ಲಿ ದೈನಿಂದನ ವ್ಯವಹಾರಗಳ ಮೇಲೆ ವಿಶ್ವಕಪ್ ನಿಧಾನವಾಗಿ ಪರಿಣಾಮ ಬೀರುತ್ತಿದೆ...
ರಿಯೋ ಡಿ ಜನೈರೋ: ಫುಟ್ಬಾಲ್ ಜ್ವರ ಹೆಚ್ಚಿರುವ ರಾಷ್ಟ್ರಗಳಲ್ಲಿ ದೈನಿಂದನ ವ್ಯವಹಾರಗಳ ಮೇಲೆ ವಿಶ್ವಕಪ್ ನಿಧಾನವಾಗಿ ಪರಿಣಾಮ ಬೀರುತ್ತಿದೆ. ಕೆಲ ರಾಷ್ಟ್ರಗಳಲ್ಲಿ ಒಂದು ರೀತಿಯಲ್ಲಿ ಬಂದ್ ಆಚರಿಸಿದಷ್ಟು ಬೀದಿಗಳು ಬಣಗೂಡುತ್ತಿವೆ.
ಚಿಲಿಯಲ್ಲಿ ವಿದ್ಯಾರ್ಥಿಗಳು ಬೇಗನೆ ಮನೆ ಸೇರುತ್ತಿದ್ದಾರೆ. ಬ್ರೆಜಿಲ್‌ನಲ್ಲಿ ಕಚೇರಿಗಳು ಮತ್ತು ಅಂಗಡಿ ಮುಗ್ಗಟ್ಟುಗಳು ಬೇಗನೆ ಕದ ಹಾಕುತ್ತಿವೆ. ಇನ್ನು ಮೆಕ್ಸಿಕೊ ನಗದಲ್ಲಿ ಸಂಚಾರ ವ್ಯತ್ಯಯವೇ ಕಾಣುತ್ತಿಲ್ಲ.
ಲ್ಯಾಟಿನ್ ಅಮೆರಿಕದ ಮೂರು ರಾಷ್ಟ್ರಗಳು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ, ಅಲ್ಲಿನ ಜನರು ಫುಟ್ಬಾಲ್ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ದೈನಂದಿನ ಬಿಸಿನೆಸ್‌ಗೆ ಹೊಡೆತ ಬಿದ್ದಿದೆ.
ಇನ್ನು ಬ್ರೆಜಿಲ್ ದೇಶದ ಅಭಿಮಾನಿಗಳು ಈಗಾಗಲೇ ಸಂಪೂರ್ಣವಾಗಿ ಫುಟ್ಬಾಲ್ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿಯೂ ದೈನಿಂದ ವ್ಯವಹಾರಗಳ ಮೇಲೆ ಫುಟ್ಬಾಲ್ ಹಬ್ಬ ಪರಿಣಾಮ ಬೀರಿದೆ.
ದೇಶದ ಪಂದ್ಯವಿದ್ದ ದಿನವಂತೂ ಯಾವುದೇ ವ್ಯವಹಾರಗಳು ನಡೆಯುವುದಿಲ್ಲವಂತೆ. ರಿಯೋ ಡಿ ಜನೈರೋದಂತಹ ನಗರಗಳಲ್ಲಿ ಸರ್ಕಾವೇ ಅರ್ಧ ದಿನ ಅಥವಾ ಪೂರ್ಣ ದಿನ ರಜೆಯನ್ನು ಘೋಷಿಸುತ್ತಿದೆಯಂತೆ.
12 ಮಿಲಿಯನ್ ಜನರನ್ನು ಹೊಂದಿರುವ ರಿಯೋ ಡಿ ಜನೈರೋದಲ್ಲಿ ಕಳೆದ ವಾರ ಕೇವಲ ಎರಡು ದಿನ ಮಾತ್ರ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರಂತೆ. ಈ ವಾರವೂ ಅದೇ ರೀತಿಯ ವಾತಾವರಣವಿದೆಯಂತೆ.