ಗೋಲ್ಡನ್ ಬೂಟ್ ರೇಸ್‌ನಲ್ಲಿ ನೇಮಾರ್
ರಿಯೋ ಡಿ ಜನೈರೋ: ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿಕೊಂಡಿರುವ ಬ್ರೆಜಿಲ್ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಮತ್ತು ಪಂದ್ಯಾವಳಿಯ ಪೊಸ್ಟರ್ ಬಾಯ್ ನೇಮಾರ್ ವೈಯಕ್ತಿಕವಾಗಿ ಅತಿ ಹೆಚ್ಚು ಗೋಲು ದಾಖಲಿಸುವ ಮೂಲಕ ಗೋಲ್ಡನ್ ಬೂಟ್ ರೇಸ್‌ನಲ್ಲಿದ್ದಾರೆ. ಬ್ರೆಜಿಲ್ ತಂಡ ಕ್ರೊವೇಷಿಯಾ ವಿರುದ್ಧ 3-1ರಿಂದ ಗೆದ್ದ, ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ 2 ಗೋಲು ದಾಖಲಿಸಿದ್ದ ನೇಮಾರ್, ಮಂಗಳವಾರ 4-1 ಗೋಲುಗಳಿಂದ ಗೆದ್ದ ತಮ್ಮ ಮೂರನೇ ಪಂದ್ಯದಲ್ಲಿ ಕೆಮರೂನ್ ವಿರುದ್ಧ 2 ಗೋಲು ದಾಖಲಿಸುವ ಮೂಲಕ ಒಟ್ಟು ನಾಲ್ಕು ಗೋಲು ದಾಖಲಿಸಿದ್ದಾರೆ. ಹೀಗಾಗಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿ ಗೋಲ್ಡನ್ ಬೂಟ್ ರೇಸ್‌ನಲ್ಲಿರುವ ಆಟಗಾರ ಎನಿಸಿದ್ದಾರೆ. ಫ್ರಾನ್ಸ್‌ನ ಕರೀಮ್ ಬೆಂಜಿಮಾ, ಜರ್ಮನಿಯ ಥಾಮಸ್ ಮುಲ್ಲರ್, ಹಾಲೆಂಡ್‌ನ ಅರ್ಜೆನ್ ರಾಬೆನ್ ಹಾಗೂ ರಾಬಿನ್ ವ್ಯಾನ್ ಪರ್ಸೆ, ಈಕ್ವೆಡಾರ್‌ನ ಎನ್ನರ್ ವೆಲೆನ್ಸಿಯಾ ಅವರು ತಲಾ ಮೂರು ಗೋಲು ದಾಖಲಿಸಿದ್ದು, ಗೋಲ್ಡನ್ ಬೂಟ್ ರೇಸ್‌ನ ಎರಡನೇ ಸ್ಥಾನದಲ್ಲಿರುವ ಆಟಗಾರರು ಎನಿಸಿದ್ದಾರೆ.