ಮಗ್ ಮೇಲೆ ಒಬಾಮಾ ವಿರಾಜಮಾನ
ಜನಪ್ರೀಯ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಾಗಿ ಇಂಗ್ಲೆಂಡ್ ಆಟಗಾರರ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಮಗ್‌ಗಳಲ್ಲಿ ಒಂದು ಎಡವಟ್ಟಾಗಿದೆ. ಇಂಗ್ಲೆಂಡ್‌ನ ವಿಶ್ವಕಪ್ ಮಗ್ ಮೇಲೆ ಆ ತಂಡದ ರಕ್ಷಣಾ ವಿಭಾಗದ ಆಟಗಾರ ಕ್ರಿಸ್ ಸ್ಮಾಲ್ಲಿಂಗ್ ಚಿತ್ರದ ಬದಲಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಫೋಟೋ ಪ್ರಿಂಟ್ ಮಾಡಲಾಗಿದೆ. ಮಾಡಿರುವುದು ತಪ್ಪಾದರೂ, ಒಬಾಮಾ ಚಿತ್ರವಿರುವ ಮಗ್‌ಗಳಿಗೆ ಭಾರೀ ಬೇಡಿಕೆ ಬಂದಿದೆಯಂತೆ.
ಆದರೆ, ಮಗ್‌ಗಳನ್ನು ತಯಾರಿಸಿದ ಕಂಪನಿ ತಾನು ಮಾಡಿದ ತಪ್ಪಿನಿಂದ ಅರ್ಧ ಲೋಡ್‌ನಷ್ಟು ಮಗ್‌ಗಳನ್ನು ಕಡಿಮೆ ದರದಲ್ಲಿ ಇಡಿಯಾಗಿ ಮಾರಾಟ ಮಾಡಿದೆಯಂತೆ. ಆದರೆ, ಅವುಗಳಗೆ ಬೇಡಿಕೆ ಬಂದಿರುವುದಷ್ಟೇ ಅಲ್ಲ, ಅಮೆರಿಕಾದವರೇ 2000 ಮಗ್‌ಗಳನ್ನು ಖರೀದಿ ಮಾಡಿದ್ದಾರೆ ಎಂಬುದು ಮತ್ತೊಂದು ವಿಶೇಷವಾಗಿದೆ.