ಇಟಲಿ ಹೊರಗಟ್ಟಿದ ಉರುಗ್ವೆ
ನಟಾಲ್: ನಿರೀಕ್ಷೆ ಮೀರಿ ಪ್ರದರ್ಶನ ನೀಡಿದ ಉರುಗ್ವೆ ತಂಡ 'ಡಿ' ಗುಂಪಿನಲ್ಲಿ ಮಂಗಳವಾರ ನಡೆದ ಪಂದ್ಯದ 80ನೇ ನಿಮಿಷದಲ್ಲಿ ಡಿಗೋ ಗಾಡಿನ್ ಅವರು ದಾಖಲಿಸಿದ ಗೋಲಿನ ನೆರವಿನೊಂದಿಗೆ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.
ಇದರೊಂದಿಗೆ ಕೇವಲ ಡ್ರಾ ಸಾಧಿಸಿದ್ದರೂ, ನಾಕೌಟ್ ಹಂತ ತಲುಪಬಲ್ಲೆ ಎಂಬ ಕಾತರದಲ್ಲಿದ್ದ ಇಟಲಿ ತಂಡವನ್ನು ಪಂದ್ಯಾವಳಿಯಿಂದ ಹೊರಹಾಕುವಲ್ಲಿ ಉರುಗ್ವೆ ಯಶಸ್ವಿಯಾಯಿತು.
ಈ ಹಿಂದೆ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದ ಲೂಯಿಸ್ ಸೂರೆಜ್ ಗೋಲು ದಾಖಲಿಸಲು ಮಾಡಿದ ಪ್ರಯತ್ನಗಳಲ್ಲಿ ವೈಫಲ್ಯ ಕಂಡರು.
ನಾಕೌಟ್ ಹಂತ ಪ್ರವೇಶಿಸಲು ಉಭಯ ತಂಡಗಳಿಗೂ ಜಯದ ಅಗತ್ಯವಿದ್ದ ಪಂದ್ಯದ ಮೊದಲಾರ್ಧಲ್ಲಿ ಉಭಯ ತಂಡಗಳು ಭಾರಿ ಹರಸಾಹಸ ನಡೆಸಿದವು. ಇಟಲಿಯ ಪ್ರಮುಖ ಆಟಗಾರ ಮಾರಿಯೋ ಬಾಲೊಟೆಲ್ಲಿ ಅವರು ಹಲವಾರು ಬಾರಿ ಚೆಂಡನ್ನು ಸ್ಪರ್ಶಿಸಿದರೂ, ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ.
ಸಿಡುಕಿನ ಉರುಗ್ವೆ ಮೊದಲಾರ್ಧ ಪಂದ್ಯದಲ್ಲಿ ಹೆಚ್ಚಿನ ಸಮಯ ಚೆಂಡಿನ ಮೇಲೆ ಪಾರಮ್ಯ ಮೆರೆದಿತ್ತು. ಉರುಗ್ವೆಯ ಪ್ರಮುಖ ಆಟಗಾರ ಲೂಯಿಸ್ ಸೂರೆಜ್ ಅವರು ಕೆಲ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಅಲ್ಲದೆ, ಇಟಲಿಯ ಜಾರ್ಜಿಯೋ ಚಿಲ್ಲೀನಿ ಮತ್ತು ಲಿಯೋನಾರ್ಡ್ ಬುನುಚ್ಚಿ ಅವರಿಗೆ ನಿರಾಸೆ ಉಂಟುಮಾಡುವಲ್ಲಿ ಉರುಗ್ವೆಯ ಎಡಿನ್ಸನ್ ಕವಾನಿ ಯಶಸ್ವಿಯಾದರು.
ಆ್ಯಂಡ್ರಿಯಾ ಪಿರ್ಲೋಸ್ ಅವರು ಸಹ ತಮಗೆ ದೊರಕಿದ ಪ್ರೀ ಕಿಕ್‌ನಲ್ಲಿ ಗೋಲು ದಾಖಲಿಸುವಲ್ಲಿ ವೈಫಲ್ಯ ಕಾಣುವ ಮೂಲಕ ಇಟಲಿ ನಿರಾಸೆ ಅನುಭವಿಸಿತು.
ಉರುಗ್ವೆ-1
ಡಿಗೋ ಗಾಡಿನ್ 80ನೇ ನಿಮಿಷ
ಇಟಲಿ-0