ಜರ್ಮನಿ ವಿಜಯ; ಸೋತರೂ ಅಮೆರಿಕಾ ನಾಕೌಟ್ಗೆ
ರೇಸಿಫ್: ಪ್ರಮುಖ ಆಟಗಾರ ಥಾಮಸ್ ಮುಲ್ಲರ್ ಗಳಿಸಿದ ಮತ್ತೊಂದು ಆಕರ್ಷಕ ಗೋಲಿನ ನೆರವಿನಿಂದ ಪ್ರಬಲ ಜರ್ಮನಿ ತಂಡ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅಮೆರಿಕ ತಂಡದ ವಿರುದ್ಧ 1-0 ಗೋಲಿನಿಂದ ಜಯಭೇರಿ ಬಾರಿಸಿದೆ.
ಎರೆನಾ ಪೆರ್ನಾಂಬುಕೊ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಜಿ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜರ್ಮನಿ ತಂಡ ಎದುರಾಳಿ ಅಮೆರಿಕ ವಿರುದ್ಧ ಪೂರ್ಣ ತನ್ನ ಪ್ರಾಬಲ್ಯ ಮೆರೆಯಿತು.
ಈ ಗೆಲವಿನೊಂದಿಗೆ ಜರ್ಮನಿ ತಂಡ ಅಂಕ ಸಂಪಾದನೆಯನ್ನು 7ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿತು.
ವಿಜೇತ ಜರ್ಮನಿ ತಂಡದ ಪರ ಪಂದ್ಯದ 55ನೇ ನಿಮಿಷದಲ್ಲಿ ಥಾಮಸ್ ಮುಲ್ಲರ್ ಗೋಲು ಗಳಿಸಿದರು. ಈ ಸೋಲಿನಿಂದಾಗಿ ಅಮೆರಿಕ ತಂಡ ಅಂಕಪಟ್ಟಿಯಲ್ಲಿ ಪೋರ್ಚುಗಲ್ ಜೊತೆ ಜಂಟಿ ಎರಡನೇ ಸ್ಥಾನ ಪಡೆಯಿತು. ಆದರೆ, ಉತ್ತಮ ಗೋಲು ಸರಾಸರಿ ಆಧಾರದ ಮೇಲೆ ಪೋರ್ಚುಗಲ್ ಪಡೆಯನ್ನು ಹೊರಗಟ್ಟಿದ ಅಮೆರಿಕನ್ನರು ನಾಕೌಟ್ ಸುತ್ತು ತಲುಪಿದರು.
ಜರ್ಮನಿ 1
ಥಾಮಸ್ ಮುಲ್ಲರ್-55ನೇ ನಿಮಿಷ
ಅಮೆರಿಕ 0