ಪೋರ್ಚುಗಲ್ಗೆ ಭಂಗ
ಬ್ರೆಸಿಲಿಯಾ: ವಿಶ್ವಖ್ಯಾತ ಕಾಲ್ಚಳಕ ಕಲಿ ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ತಂಡ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಗುಂಪು ಸೆಣಸಿನಿಂದಲೇ ಹೊರಬಿದ್ದಿದೆ.
ಎಸ್ಟಾಡಿಯೊ ನಾಸಿಯೊನಲ್ ಡಿ ಬ್ರೆಸಿಲಿಯಾ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ 'ಜಿ' ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪೋರ್ಚುಗಲ್ ತಂಡ 2-1 ಗೋಲು ಗಳಿಂದ ಘಾನಾ ವಿರುದ್ಧ ಗೆಲವು ದಾಖಲಿಸಿತು. ಈ ಗೆಲವಿನೊಂದಿಗೆ ಪೋರ್ಚುಗಲ್ ತಂಡ ಅಂಕಪಟ್ಟಿಯಲ್ಲಿ ಅಮೆರಿಕ ವಿರುದ್ಧ ಜಂಟಿ ಎರಡನೇ ಸ್ಥಾನದ ಗೌರವ ಪಡೆಯಿತು. ಆದರೆ, ಗೋಲು ಸರಾಸರಿಯಲ್ಲಿ ಅಮೆರಿಕಕ್ಕಿಂತ ಹಿನ್ನಡೆ ಸಾಧಿಸಿದ್ದ ಪರಿಣಾಮ ರೊನಾಲ್ಡೊ ಪಡೆ ಮೂರನೇ ಸ್ಥಾನಕ್ಕೆ ಕುಸಿದು ವಿಶ್ವಕಪ್ನಿಂದ ಹೊರಬಿದ್ದಿತು.
ಪೋರ್ಚುಗಲ್ ಪರ ಜಾನ್ ಬೋಯೆ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ತಲಾ ಒಂದು ಗೋಲು ಗಳಿಸಿದರೆ, ಘಾನಾ ತಂಡಕ್ಕೆ ಅಸಾಮೋಹ್ ಗ್ಯಾನ್ ಒಂದು ಗೋಲು ಗಳಿಸಿಕೊಟ್ಟರು.
ಪೋರ್ಚುಗಲ್ 2
ಜಾನ್ ಬೋಯೆ-31ನೇ ನಿಮಿಷ
ಕ್ರಿಸ್ಟಿಯಾನೊ ರೊನಾಲ್ಡೊ-80ನೇ ನಿಮಿಷ
ಘಾನಾ 1
ಅಸಾಮೋಹ್ ಗ್ಯಾನ್-57ನೇ ನಿಮಿಷ