ಫಿಫಾ ವಿಶ್ವಕಪ್ 2014

ಮೆಸ್ಸಿ ಮೇಲೆ ಬ್ರೆಜಿಲ್ ಪ್ರೀತಿ

ಸಾವೊ ಪೊಲೊ: ತವರಿನಲ್ಲಿ ನಡೆಯುತ್ತಿರುವ ವಿಶ್ವದ ಪ್ರತಿಷ್ಠಿತ ಪಂದ್ಯಾವಳಿಯನ್ನು ವೀಕ್ಷಿಸುತ್ತಿರುವ ಬ್ರೆಜಿಲ್ ಅಭಿಮಾನಿಗಳು ಅರ್ಜೆಂಟೀನಾವನ್ನು ದ್ವೇಷಿಸಬಹುದು. ಆದರೆ, ಆ ತಂಡದ ಪ್ರಮುಖ ಆಟಗಾರ ಲಯೋನೆಲ್ ಮೆಸ್ಸಿ ಅವರನ್ನು ತುಂಬು ಹೃದಯದಿಂದ ಪ್ರೀತಿಸುತ್ತಿದ್ದಾರೆ.
ಕಾರಣ, ಪಂದ್ಯಾವಳಿಯಲ್ಲಿ ಮೆಸ್ಸಿ ನೀಡುತ್ತಿರುವ ಮಾಂತ್ರಿಕ ಪ್ರದರ್ಶನ. ಚೆಂಡಿನ ಮೇಲೆ ಮೆಸ್ಸಿ ಸಾಧಿಸುವ ಹಿಡಿತ ಮತ್ತು ಎದುರಾಳಿ ಗೋಲ್ ಕೀಪರ್‌ಗಳನ್ನು ನಿಯಂತ್ರಿಸುವ ಮೂಲಕ ಗೋಲುಪೆಟ್ಟಿಗೆಯತ್ತ ಚೆಂಡನ್ನು ಕಳುಹಿಸುವ ಅವರ ಚತುರತೆ ಬ್ರೆಜಿಲ್ ಅಭಿಮಾನಿಗಳ ಮನಸೊರೆಗೊಂಡಿದೆ. ಹೀಗಾಗಿಯೇ, ಬ್ರೆಜಿಲ್‌ನ ಫುಟ್ಬಾಲ್ ದಂತಕತೆ ರೊನಾಲ್ಡೊ ಮೆಸ್ಸಿ ಅವರನ್ನು ಹೊಗಳಿದ್ದಾರೆ. ಅಲ್ಲದೆ, ಬುಧವಾರ ಲಯೋನೆಲ್ ಮೆಸ್ಸಿ ತಮ್ಮ 27ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ಅದನ್ನು ಬ್ರೆಜಿಲ್ ಅಭಿಮಾನಿಗಳೂ ಸಂಭ್ರಮಿಸಿದ್ದಾರೆ.  'ಮೆಸ್ಸಿ ಅರ್ಜೆಂಟೀನಾ ಪರ ಆಡದಿದ್ದರೆ, ನಮ್ಮ ತಂಡದಲ್ಲಿ ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಯಸಿದರೆ, ನಾನು ಮೆಸ್ಸಿಗೆ ಮೊದಲ ಆದ್ಯತೆ ನೀಡುತ್ತಿದ್ದೆ. ನನ್ನ ಸ್ನೇಹಿತ ಡಿಗೋ ಮರಡೋನಾ ಅವರ ಸ್ಥಾನದಲ್ಲಿ ಮೆಸ್ಸಿಯನ್ನು ನಾನು ಕಲ್ಪಿಸಿಕೊಳ್ಳುತ್ತೇನೆ' ಎಂದಿದ್ದಾರೆ ಬ್ರೆಜಿಲ್‌ನ ಮಾಜಿ ಆಟಗಾರ ರೊನಾಲ್ಡೊ.


ಮುಂಟಾರಿ, ಕೆವಿನ್ ಪ್ರಿನ್ಸ್‌ಗೆ ಕೊಕ್
ಬ್ರಾಸಿಲಿಯಾ: ಅಶಿಸ್ತು ಮತ್ತು ಅನುಚಿತ ವರ್ತನೆಯ ಹಿನ್ನೆಲೆಯಲ್ಲಿ ತನ್ನ ಇಬ್ಬರು ಆಟಗಾರರನ್ನು ಘಾನಾ ತಂಡದಿಂದ ಹೊರಗಟ್ಟಿದೆ. ಮಿಡ್ ಫೀಲ್ಡರ್‌ಗಳಾದ ಸುಲ್ಲೇ ಮುಂಟಾರಿ ಮತ್ತು ಕೆವಿನ್-ಪ್ರಿನ್ಸ್‌ಗೆ ಘಾನಾ ಕೊಕ್ ನೀಡಿದೆ. ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿರುವ ಘಾನಾ, ತಂಡದ ಪ್ರದರ್ಶನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಿರಲು ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಈ ಇಬ್ಬರು ಆಟಗಾರರನ್ನು ಕೈಬಿಟ್ಟಿರುವ ಕುರಿತು ಘಾನಾ ಫುಟ್ಬಾಲ್ ಸಂಸ್ಥೆ ಖಚಿತಪಡಿಸಿದೆ. ಘಾನಾ ಫುಟ್ಬಾಲ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೊಬ್ಬರ ಮೇಲೆ ದೈಹಿಕ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಮುಂಟಾರಿ ಮೇಲೆ ನಿಷೇಧ ಹೇರಲಾಗಿದೆ. ತಂಡದ ಕೋಚ್ ಕ್ವೆಸಿ ಅಪ್ಪೈಹ ವಿರುದ್ಧ ಅಸಭ್ಯವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಕೆವಿನ್ ಪ್ರಿನ್ಸ್ ಮೇಲೆ ನಿಷೇಧ ಹೇರಲಾಗಿದೆ ಎಂದು ಘಾನಾ ಫುಟ್ಬಾಲ್ ಸಂಸ್ಥೆ ತಿಳಿಸಿದೆ. ಘಾನಾ ಫುಟ್ಬಾಲ್ ಫೆಡರೇಷನ್ ಆಟಗಾರರಿಗೆ ವಿಶ್ವಕಪ್ ಬೋನಸ್ ಸಂಭಾವನೆ ನೀಡದ ಹಿನ್ನೆಲೆಯಲ್ಲಿ ತಂಡದ ಆಟಗಾರರು ಈ ವಾರ ಬೇಸರ ವ್ಯಕ್ತಪಡಿಸಿದ್ದರು.

ಮಿಲೇನಿಯರ್ ಆದ್ರೂ ಫುಟ್ಬಾಲ್ ರೆಫ್ರಿ
ಸಾವ್ ಪೋಲೊ:  ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ 25 ಮಂದಿಗಳಲ್ಲಿ ಒರ್ವ ಮಾತ್ರ ಕೋಟ್ಯಾಧಿಪತಿ. ಜೊನಾಸ್ ಎರಿಕ್‌ಸನ್ ಎಂಬಾತ ಆರ್ಥಿಕವಾಗಿ ಶ್ರೀಮಂತನಾಗಿದ್ದರೂ, ಫುಟ್ಬಾಲ್ ಮೇಲಿನ ಪ್ರೀತಿಯಿಂದ ಪಂದ್ಯಾವಳಿಯಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಜೊನಾಸ್ ಈಗ ಮಾತ್ರ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆತನಿಗೆ ಬರೋಬ್ಬರಿ 20 ವರ್ಷಗಳ ಕಾಲ ರೆಫ್ರಿಯಾಗಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ಈತ ವೃತ್ತಿಪರತೆ ಅಥವಾ ಹೊಟ್ಟೆಪಾಡಿಗಾಗಿ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕ್ರೀಡೆಯ ಮೇಲಿನ ಅಭಿಮಾನಿ ಹಾಗೂ ಪ್ರೀತಿ ಆತ ಇಷ್ಟು ವರ್ಷಗಳ ಕಾಲ ರೆಫ್ರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ.
ಬ್ರೆಜಿಲ್ ಮತ್ತು ಕೆಮರೂನ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ ಜೊನಾಸ್, ಇಂದಿನ ವೇಗವಾಗಿ ಮಾರ್ಪಡುತ್ತಿರುವ ಕ್ರೀಡೆಯಲ್ಲಿ ರೆಫ್ರಿಗಳು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೆಫ್ರಿ ಮಾಡುವ ಒಟ್ಟಾರೆ ಗುಣಮಟ್ಟ ಇಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಏರಿಕೆಯಾಗಿದೆ. ಈ ಕ್ರೀಡೆ ಪ್ರಸ್ತುತ ಪರಿಸ್ಥಿತಿಯಲ್ಲಿ ವೇಗತೆ ಪಡೆಯುತ್ತಿದೆ. ಹಾಗಾಗಿ ಇಂದಿನ ದಿನಗಳಲ್ಲಿ ರೆಫ್ರಿಗಳು ಹೆಚ್ಚು ಅಧ್ಯಯನ ನಡೆಸಬೇಕು, ಅವರ ಮನಸ್ಸಿಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!