ಸೂರೆಜ್ ಜಾಹೀರಾತು ನಿಲ್ಲಿಸಿದ ಅಡಿಡಾಸ್
ಇಟಲಿಯ ರಕ್ಷಣಾತ್ಮಕ ಆಟಗಾರ ಜಾರ್ಜಿಯೊ ಚಿಲಿನಿ ಅವರ ಭುಜವನ್ನು ಕಚ್ಚಿದ ಪ್ರಕರಣದಲ್ಲಿ ಉರುಗ್ವೆಯ...
ರಿಯೊ ಡಿ ಜೆನೈರೊ: ಇಟಲಿಯ ರಕ್ಷಣಾತ್ಮಕ ಆಟಗಾರ ಜಾರ್ಜಿಯೊ ಚಿಲಿನಿ ಅವರ ಭುಜವನ್ನು ಕಚ್ಚಿದ ಪ್ರಕರಣದಲ್ಲಿ ಉರುಗ್ವೆಯ ಲೂಯಿಸ್ ಸೂರೆಜ್‌ಗೆ ನಾಲ್ಕು ತಿಂಗಳ ನಿಷೇಧದ ಶಿಕ್ಷೆಯನ್ನು ನೀಡಿರುವ ಫಿಫಾ ನಿರ್ಧಾರವನ್ನು ಕ್ರೀಡಾ ಸಾಮಾಗ್ರಿ ಕಂಪನಿ ಅಡಿಡಾಸ್ ಸಂಪೂರ್ಣ ಬೆಂಬಲ ಸೂಚಿಸಿದೆ. ಅಲ್ಲದೆ ತಮ್ಮ ಕಂಪನಿಯ ರಾಯಭಾರಿಯಾಗಿರುವ ಸೂರೆಜ್ ಅವರ ಜಾಹೀರಾತುಗಳನ್ನು ಪ್ರಕಟಿಸದಿರಲು ಅಡಿಡಾಸ್ ನಿರ್ಧರಿಸಿದೆ. ಅಡಿಡಾಸ್, ಫಿಫಾ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಲಿದೆ. ಲೂಯಿಸ್ ಸೂರೇಜ್ ಅವರ ವರ್ತನೆ ಬೇಸರ ತಂದಿದೆ. ಅಲ್ಲದೆ ಫಿಫಾ ವಿಶ್ವಕಪ್ ವೇಳೆ ಸುರೇಜ್ ಅವರನ್ನೊಳಗೊಂಡ ಜಾಹೀರಾತು ಪ್ರಚಾರವನ್ನು ಮಾಡದಿರಲು ನಿರ್ಧರಿಸಿದ್ದೇವೆ ಎಂದು ಅಡಿಡಾಸ್ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.