ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಫಿಫಾ ವಿಶ್ವಕಪ್‌ಗೆ 1.57 ಲಕ್ಷ ಭದ್ರತಾ ಸಿಬ್ಬಂದಿ

Mainashree
Updated On : 12 Jun 2014, 12:44 pm

ಬ್ರೆಜಿಲಿಯಾ: ಮುಂದಿನ ತಿಂಗಳು ಆರಂಭವಾಗಲಿರುವ ಫಿಫಾ ವಿಶ್ವಕಪ್ ವಿರುದ್ಧ ಬ್ರೆಜಿಲ್‌ನಲ್ಲಿ ವ್ಯಾಪಕ ಹಿಂಸಾತ್ಮಕ ಹೋರಾಟ ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ, ವಿಶ್ವಕಪ್ ಪಂದ್ಯಾವಳಿಗೆ ಭದ್ರತೆ ನೀಡಲು ಒಟ್ಟು 1.57 ಲಕ್ಷ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಬ್ರೆಜಿಲ್ ಸರ್ಕಾರ ತಿಳಿಸಿದೆ.
ಶುಕ್ರವಾರ ಮಾಹಿತಿ ನೀಡಿರುವ ಬ್ರೆಜಿಲ್ ಗೃಹ ಸಚಿವಾಲಯ, ಪಂದ್ಯಾವಳಿಗೆ ಕ್ರಮವಾಗಿ 57 ಸಾವಿರ ನೌಕಾಸೇನೆ, ಭೂಸೇನೆ ಹಾಗೂ ವಾಯುಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ತುರ್ತು ಸಂದರ್ಭಗಳನ್ನು ನಿಭಾಯಿಸಲು ಹೆಚ್ಚುವರಿಯಾಗಿ 21 ಸಾವಿರ ಸಿಬ್ಬಂದಿ ನೀಡಲಾಗಿದೆ ಎಂದು ತಿಳಿಸಿದೆ.      ಬ್ರೆಜಿಲ್ ಸರ್ಕಾರ 2012ರಿಂದ ಈ ಪಂದ್ಯಾವಳಿಯ ಆಯೋಜನೆಗಾಗಿ ತನ್ನ ಸೇನೆಯನ್ನು ಬಲಪಡಿಸಿದ್ದು, ಇದಕ್ಕಾಗಿ ರು. 188.43 ಕೋಟಿಯನ್ನು ಖರ್ಚು ಮಾಡಿದೆ.
ಈ ವೇಳೆ ಮಾತನಾಡಿದ ನ್ಯಾಯಾಂಗ ಸಚಿವರಾದ ಜೋಸ್ ಎಡೌರ್ಡೊ ಕಾರ್ಡೊಜ್, ಇತ್ತೀಚೆಗೆ ನಡೆಯುತ್ತಿರುವ ಪ್ರತಿಭಟನೆಗಳು ಹೋರಾಟಗಳನ್ನು ನಂಬಲು ಅಸಾಧ್ಯ. ಈ ಪ್ರತಿಭಟನೆ ವೇಳೆ ಕೋಟ್ಯಾಂತರ ಜನರು ಬೀದಿಗಿಳಿಯಲಿದ್ದು, ಕೆಲವೊಮ್ಮೆ ಹಿಂಸಾತ್ಮಕ ಘಟನೆಗಳು ಸಂಭವಿಸುತ್ತಿವೆ. ಇದರಿಂದ ಪಂದ್ಯಾವಳಿಯ ಆಯೋಜಕರಲ್ಲಿ ಭಯ ಹುಟ್ಟಿದೆ ಎಂದರು.
ಪ್ರತಿಭಟನೆಗಳು ಕಳೆದ ಜೂನ್ ತಿಂಗಳಲ್ಲಿ ನಡೆದಕ್ಕಿಂತ ಸಣ್ಣ ಪ್ರಮಾಣದಲ್ಲಿರುವ ನಿರೀಕ್ಷೆ ಇದೆ. ಆದರೆ ಪ್ರಮಾಣಿಕವಾಗಿ ಹೇಳುವುದಾದರೆ, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement