ಸಬ್ಬಕ್ಕಿ ವಡೆ ಬೇಕಾಗುವ ಪದಾರ್ಥಗಳು .ಸಬ್ಬಕ್ಕಿ 1 ಕಪ್ ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ,2 ಮಧ್ಯಮ ಗಾತ್ರ ಈರುಳ್ಳಿ1 ಚಮಚ ಜೀರಿಗೆ, ಹುರಿದ ಕಡಲೆ ಬೀಜ,ಕೊತ್ತಂಬರಿ ಸೊಪ್ಪು, ಪುದಿನಅಕ್ಕಿ ಹಿಟ್ಟು ಉಪ್ಪು.ಮಾಡುವ ವಿಧಾನ .ಮೊದಲಿಗೆ ಸಬ್ಬಕ್ಕಿಯನ್ನು ತೊಳೆದು 4 ಗಂಟೆಗಳ ಕಾಲ ನೆನೆಸಿಕೊಳ್ಳಬೇಕು.ನಂತರ ನೀರನ್ನು ಬಸಿದು ಬಟ್ಟಲಿಗೆ ಹಾಕಿಕೊಳ್ಳಿ.ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿ, ಶುಂಠಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಹುರಿದ ಕಡಲೇ ಬೀಜವನ್ನು ಪುಡಿ ಮಾಡಿ ಮಿಶ್ರಣಕ್ಕೆ ಹಾಕಿ.ನಂತರ ಉಪ್ಪು, ಅಕ್ಕಿ ಹಿಟ್ಟು, ಜೀರಿಗೆ, ಪುದಿನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ.ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಬೇಕಾದ ಆಕಾರಕ್ಕೆ ತಟ್ಟಿ ಕಂದು ಬಣ್ಣ ಬರುವವರೆಗೂ ಕರೆಯಿರಿ. ತೆಂಗಿನ ಕಾಯಿ ಚಟ್ನಿ ಜೊತೆ ಸಬ್ಬಕ್ಕಿ ವಡೆ ತಿಂದರೆ ತುಂಬಾ ರುಚಿಯಾಗಿರುತ್ತೆ..-ಡಿ.ಶಿಲ್ಪ.Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics