ಆಲೂ ಪಾಲಕ್ ಕಟ್ಲೆಟ್ 
ಅಡುಗೆ

ಆಲೂ ಪಾಲಕ್ ಕಟ್ಲೆಟ್

ಆಲೂ ಪಾಲಕ್ ಕಟ್ಲೆಟ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ಬೇಯಿಸಿದ ಆಲೂಗಡ್ಡೆ
  • ಪಾಲಕ್ ಸೊಪ್ಪು - 1 ಕಟ್ಟು
  • ಈರುಳ್ಳಿ - 2
  • ಉಪ್ಪು - ರುಚಿಗೆ ತಕ್ಕಷ್ಟು
  • ಕಡಲೆ ಬೀಡದ ಪುಡಿ - ಸ್ವಲ್ಪ
  • ಶುಂಠಿ - ಸ್ವಲ್ಪ
  • ಕಡಲೆಹಿಟ್ಟು - 2 ಚಮಚ
  • ಮೆಣಸಿನಪುಡಿ - ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಬ್ರೆಡ್ ಪೌಡರ್ - 12 ಚಮಚ
  • ಗರಂ ಮಸಾಲೆ - 2 ಚಮಚ
ಮಾಡುವ ವಿಧಾನ...
  • ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ನುಣ್ಣಗೆ ಮಾಡಿಕೊಂಡಿರಬೇಕು. ಇದೇ ರೀತಿ ಪಾಲಕ್ ಸೊಪ್ಪನ್ನು ಚೆನ್ನಾಗಿ ಬೇಯಿಸಿ ರುಬ್ಬಿಕೊಳ್ಳಬೇಕು.
  • ಒಂದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕಡ್ಲೆಬೀಜದ ಪುಡಿ, ಶುಂಠಿ ಪೇಸ್ಟ್, ಕಡಲೆಹಿಟ್ಟು, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಗರಂ ಮಸಾಲೆಯನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ಇದಕ್ಕೆ ಬೇಯಿಸಿ ರುಬ್ಬಿಕೊಂಡ ಆಲೂ ಹಾಗೂ ಪಾಲಕ್ ಸೊಪ್ಪನ್ನು ಚೆನ್ನಾಗಿ ಕಲಿಸಿಕೊಳ್ಳಬೇಕು. ಇದನ್ನು ಕಟ್ಲೆಟ್ ಆಕಾರಕ್ಕೆ ಮಾಡಿ ಬ್ರೆಡ್ ಪೌಡರ್ ಮೇಲೆ ಉರುಳಿಸಿಟ್ಟುಕೊಳ್ಳಬೇಕು.
  • ನಂತರ ಒಲೆ ಮೇಲೆ ತವಾ ಇಟ್ಟು ಎರಡೂ ಬದಿಯಲ್ಲಿಯೂ ತುಪ್ಪ ಹಾಕಿ ಕಾಯಿಸಿದರೆ ರುಚಿಕರವಾದ ಕಟ್ಲೆಟ್ ತಯಾರಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈಶಾನ್ಯ ರಾಜ್ಯಗಳು 'ಭಾರತದ ಅಷ್ಟಲಕ್ಷ್ಮಿ'ಯರಿದ್ದಂತೆ, 'Act East', 'Act Fast' ನೀತಿಗೆ ಹೆಚ್ಚಿನ ಒತ್ತು: ಪ್ರಧಾನಿ ಮೋದಿ

Delhi Liquor Scam: ನ್ಯಾ.ಸ್ವರ್ಣ ಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್ ಬೆನ್ನಲ್ಲೇ ಕೋರ್ಟ್ ಬಹಿಷ್ಕರಿಸಿದ ಸಿಸೋಡಿಯಾ..!

2013-18 ರಲ್ಲಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ- ಅವರೀಗ ಅಧಿಕಾರ ಬಿಟ್ಟು ಕೊಡೋಕೆ 'ಸಿದ್ಧ'ರಾಮಯ್ಯ: ಕೆ.ಎನ್ ರಾಜಣ್ಣ

ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಟೆಹ್ರಾನ್ ಷರತ್ತುಗಳಿಗೆ ‘NO’ ಎಂದ ಅಮೆರಿಕಾ; ಸಂದಿಗ್ಧ ಸ್ಥಿತಿಯಲ್ಲಿ ಶಾಂತಿ ಮಾತುಕತೆ

ಟ್ರಂಪ್ ಕೈಗೆ ಗಾಯ, ಬಣ್ಣ ಬದಲಾವಣೆ: ಫೋಟೋ ವೈರಲ್, ಅಮೆರಿಕಾ ಅಧ್ಯಕ್ಷರ ಆರೋಗ್ಯ ಕುರಿತು ಊಹಾಪೋಹ ಶುರು..!

SCROLL FOR NEXT