- ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು- 1.5 ಬಟ್ಟಲು
- ಅಕ್ಕಿ ಹಿಟ್ಟು- 2 ಚಮಚ
- ಉಪ್ಪು-ಸ್ವಲ್ಪ
- ತುಪ್ಪ-2 ಚಮಚ
- ಎಣ್ಣೆ- ಅಗತ್ಯಕ್ಕೆ ಅನುಗುಣವಾಗಿ
- ಕೊಬ್ಬರಿ ಪುಡಿ- 1 ಬಟ್ಟಲು
- ಬೆಲ್ಲ- ಅರ್ಧ ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
- ಬಾದಾಮಿ- ಸಣ್ಣಗೆ ಹೆಚ್ಚಿದ್ದು 1 ಚಮಚ
- ಗೋಡಂಬಿ- ಸಣ್ಣಗೆ ಹೆಚ್ಚಿದ್ದು 1 ಚಮಚ
- ಒಣದ್ರಾಕ್ಷಿ- 2 ಚಮಚ
- ಮೊದಲು ಪಾತ್ರೆಯೊಂದಕ್ಕೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ತುಪ್ಪ ಹಾಗೂ ನೀರು ಹಾಕಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು.
- ನಂತರ ಬಾಣಲೆಗೆ ಸ್ವಲ್ಪ ಕೊಬ್ಬರಿ ಪುಡಿ, ಬೆಲ್ಲ, ಏಲಕ್ಕಿ ಪುಡಿ ಹಾಗೂ ಬಾದಾಮಿ, ಗೋಡಂಬಿ, ದ್ರಾಕ್ಷಿ, ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು.
- ಈಗಾಗಲೇ ತಯಾರಿಸಿಕೊಂಡ ಹಿಟ್ಟನ್ನು ಸಣ್ಣಗೆ ಪೂರಿ ಆಕಾರಕ್ಕೆ ಒತ್ತಿಕೊಂಡು ಮಧ್ಯೆ ಕೊಬ್ಬರಿ ಹಾಗೂ ಬೆಲ್ಲದ ಮಿಶ್ರಣವನ್ನು ಇಟ್ಟು ಮೋದಕದ ಆಕಾರ ತಯಾರಿಸಿಕೊಳ್ಳಬೇಕು. ತಯಾರಿಸಿಕೊಂಡ ಈ ಮೋದಕಗಳನ್ನು ಎಣ್ಣೆಯಲ್ಲಿ ಹಾಕಿ ಕೆಂಪಗೆ ಖರಿದರೆ ರುಚಿಕರವಾದ ಫ್ರೈಡ್ ಮೋದಕ ಸವಿಯಲು ಸಿದ್ಧ.