- ಅಕ್ಕಿ- ಅರ್ಧ ಬಟ್ಟಲು
- ಉದ್ದಿನ ಬೇಳೆ - 1/4 ಬಟ್ಟಲು
- ಬೆಲ್ಲ- 1 ಬಟ್ಟಲು
- ಕಡಲೆಬೇಳೆ -1 ಬಟ್ಟಲು 2 ಗಂಟೆ
- ಕೊಬ್ಬರಿ ತುರಿ
- ಏಲಕ್ಕಿ ಪುಡಿ
- ತುಪ್ಪ- ಸ್ವಲ್ಪ
- ಎಣ್ಣೆ - ಕರಿಯಲು
- ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು.
- ನಂತರ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಸ್ವಲ್ಪ ಸಕ್ಕರೆ ಹಾಕಿ 8 ಗಂಟೆಗಳ ಕಾಲ ನೆನೆಯಲು ಬಿಡಬೇಕು.
- ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೆಂದ ಕಡಲೆಬೇಳೆಗೆ ಬೆಲ್ಲವನ್ನ, ಏಲಕ್ಕಿ ಹಾಗೂ ತುಪ್ಪವನ್ನು ಹಾಕಿ ಊರ್ಣವನ್ನು ಸಿದ್ಧಪಡಿಸಿಕೊಳ್ಳಬೇಕು.
- ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದ ನಂತರ ಊರ್ಣವನ್ನು ಉಂಡೆಗಳನ್ನು ಮಾಡಿಟ್ಟುಕೊಂಡು ಈ ಹಿಂದೆಯೇ ರುಬ್ಬಿಕೊಂಡಿದ್ದ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಸ್ವೀಟ್ ಬೋಂಡಾ ಸವಿಯಲು ಸಿದ್ಧ.