- ಸ್ವೀಟ್ಲೆಸ್ ಬ್ರೆಡ್-6
- ಸಣ್ಣ ರವೆ-1 ಬಟ್ಟಲು
- ಮೊಸರು- 1 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಮೊದಲು ಬ್ರೆಡ್ ಗಳನ್ನು ತೆಗೆದುಕೊಂಡು ತುದಿಗಳಲ್ಲಿ ಒಣಗಿರುವ ಬ್ರೆಡ್ ಭಾಗಗಳನ್ನು ಕತ್ತರಿಸಿ. ಬಳಿಕ ಬ್ರೆಡ್ ನ್ನು ಮಿಕ್ಸಿ ಜಾರ್'ಗೆ ಹಾಕಿ ಪುಡಿ ಮಾಡಿಕೊಳ್ಳಿ
- ಈ ಪುಡಿಯನ್ನು ಒಂದು ಪಾತ್ರೆಗೆ ಹಾಕಿ. ಬಳಿಕ ರವೆ, ಮೊಸರು ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಹಾಕಿ ಗಟ್ಟಿಗೆ ಕಲಸಿಡಿ. ಈ ಹಿಟ್ಟನ್ನು 1 ಗಂಟೆಗಳ ಕಾಲ ನೆನೆಯಲು ಬಿಡಿ.
- ನೆನೆದ ಹಿಟ್ಟನ್ನು ಇಡ್ಲಿ ಪ್ಲೇಟ್'ಗಳಿಗೆ ಹಾಕಿ ಹಬೆಯಲ್ಲಿ ಬೇಯಿಸಿದರೆ, ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬ್ರೆಡ್ ಇಡ್ಲಿ ಸವಿಯಲು ಸಿದ್ಧ,