- ಗೋಧಿ ಹಿಟ್ಟು: 1 ಕಪ್
- ತುರಿದ ತೆಂಗಿನಕಾಯಿ: 1 ಕಪ್
- ಬೆಲ್ಲ (ಪುಡಿ): 1.5 ಕಪ್
- ಏಲಕ್ಕಿ ಪುಡಿ: 1/2 ಟೀಚಮಚ
- ತುಪ್ಪ: 2 ಟೀಚಮಚ
- ಕರೆಯಲು ಸಾಕಷ್ಟು ಎಣ್ಣೆ
- ತೆಂಗಿನಕಾಯಿ ತುರಿ ಮತ್ತು 3/4 ಕಪ್ ಬೆಲ್ಲದೊಂದಿಗೆ ಹೂರಣ ತಯಾರಿಸಿ.
- ಒಂದು ಕಪ್ ನೀರನ್ನು ಕುದಿಸಿ ಮತ್ತು ಅದರಲ್ಲಿ 3/4 ಕಪ್ ಬೆಲ್ಲವನ್ನು ಕರಗಿಸಿ.
- ಅದು ತಣ್ಣಗಾದ ನಂತರ ಅದಕ್ಕೆ ಗೋಧಿ ಹಿಟ್ಟು, ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ. ನಂತರ ಇಡ್ಲಿ ಹಿಟ್ಟಿನಂತೆ ಸ್ಥಿರತೆ ಬರುವವರೆಗು ಚೆನ್ನಾಗಿ ಮಿಶ್ರಣ ಮಾಡಿ.
- ಬಾಣಲೆಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ. ಮಧ್ಯಮ ಗಾತ್ರದಲ್ಲಿ ಹೂರಣದ ಉಂಡೆಗಳನ್ನು ಮಾಡಿಕೊಳ್ಳಿ. ಅವುಗಳನ್ನು ಹಿಟ್ಟಿನಲ್ಲಿ ಅದ್ದಿ ಮತ್ತು ಎಣ್ಣೆಯಲ್ಲಿ ಬೇಯಿಸಿ. ಚೆನ್ನಾಗಿ ಬೆಂದ ಮೇಲೆ ಹೊರತೆಗೆಯಿರಿ.
ಈಗ ರುಚಿಯಾದ ಸಿಹಿ ಬೋಂಡಾ ಸಿವಿಯಲು ಸಿದ್ಧವಾಗಿದೆ.
ಬೇಕಾಗುವ ಪದಾರ್ಥಗಳುತಯಾರಾದ ಹೂರಣ- ಅಖಿಲಾ ತ್ಯಾಗರಾಜನ್, ಬೆಂಗಳೂರು