ಬೇಕಾಗುವ ಪದಾರ್ಥಗಳು...
ಅಕ್ಕಿ - 3/4 ಬಟ್ಟಲು
ತೊಗರಿ ಬೇಳೆ- 1/2 ಬಟ್ಟಲು
ಮೆಣಸು - 1 ಚಮಚ
ಜೀರಿಗೆ - 1 ಚಮಚ
ಕರಿಬೇವು - ಸ್ವಲ್ಪ
ಒಣಗಿದ ಮೆಣಸಿನಕಾಯಿ - 3
ಬೆಳ್ಳುಳ್ಳಿ - 6
ಎಣ್ಣೆ - 3 ಚಮಚ
ಸಾಸಿವೆ - ಸ್ವಲ್ಪ
ಜಜ್ಜಿದ ಬೆಳ್ಳುಳ್ಳಿ - 3
ಒಣ ಮೆಣಸಿನಕಾಯಿ - 2
ಟೊಮ್ಯಾಟೊ - 2 ಅಥವಾ 3
ಅರಿಶಿನ ಪುಡಿ - 1/2 ಚಮಚ
ರಸಂ ಪುಡಿ - 2 ಚಮಚ
ಹುಣಸೆ ರಸ - ನಿಂಬೆ ಗಾತ್ರದ ಹುಣಸೆ + 1/4 ಕಪ್ ನೀರು ಹಿಂಡಿ ರಸ ತಯಾರಿಸಿ
ಉಪ್ಪು - ರುಚಿಗೆತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಾಡುವ ವಿಧಾನ...
ಮೊದಲು ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು 30 ನಿಮಿಷಗಳ ನೆನೆಯಲು ಬಿಡಿ.
ನಂತರ ಕಾಳು ಮೆಣಸು ಜೀರಿಗೆ, ಕರಿಬೇವು, ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಒರಳಿಗೆ ಹಾಕಿ ಜಜ್ಜಿಕೊಳ್ಳಿ.
ಕುಕ್ಕರ್‌ನ್ನು ಒಲೆಯ ಮೇಲಿಟ್ಟು, ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನಕಾಯಿ ಸೇರಿಸಿ ಹುರಿಯಿರಿ.
ಕತ್ತರಿಸಿದ ಟೊಮ್ಯಾಟೊ ಸೇರಿಸಿ . ಅದು ಮೆತ್ತಗಾಗುವವರೆಗೆ ಬೇಯಿಸಿ. ಬಳಿಕ ಅರಿಶಿನ ಮತ್ತು ರಸಂ ಪುಡಿ, ಹುಣಸೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಬಳಿಕ ನೆನೆಸಿದ ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅಕ್ಕಿಗೆ 5 ಪಟ್ಟು ಹೆಚ್ಚಿಗೆ ನೀರು, ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿ ಚೆನ್ನಾಗಿ ಮಿಶ್ರಣ ಮಾಡಿ. ಕುಕ್ಕರ್ ಮುಚ್ಚಳ ಮುಚ್ಚಿ 4 ರಿಂದ 5 ಸೀಟಿ ಊದಿಸಿ. .ತಣ್ಣಗಾದ ನಂತರ, ತೆರೆದು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ರುಚಿಕರವಾದ ರಸಂ ರೈಸ್ ಸವಿಯಲು ಸಿದ್ಧ.