ನವಣೆ ಸೌತೆಕಾಯಿ ದೋಸೆ 
ಅಡುಗೆ

ನವಣೆ ಸೌತೆಕಾಯಿ ದೋಸೆ | Navane southekai dose Recipe in Kannada

ಅಕ್ಕಿ ದೋಸೆಗಿಂತ ವಿಭಿನ್ನವಾಗಿರುವ ಈ ದೋಸೆ ಮೃದುವಾಗಿ, ಸುವಾಸನೆಯಿಂದ ಕೂಡಿದ್ದು, ಜೀರ್ಣಕ್ರಿಯೆಗೂ ಸಹಾಯಕವಾಗಿದೆ. ನವಣೆಯಲ್ಲಿ ನಾರಿನಾಂಶ, ಖನಿಜಾಂಶಗಳು ಹಾಗೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಬೆಳಗಿನ ಉಪಾಹಾರಕ್ಕೆ ರುಚಿಯ ಜೊತೆಗೆ ಆರೋಗ್ಯಕ್ಕೂ ಒತ್ತು ನೀಡಲು ಬಯಸುವವರಿಗೆ ನವಣೆ ಸೌತೆಕಾಯಿ ದೋಸೆ ಉತ್ತಮ ಆಯ್ಕೆಯಾಗಿದೆ. ಸಿರಿಧಾನ್ಯಗಳಲ್ಲಿ ಒಂದಾದ ನವಣೆಯ ಪೌಷ್ಟಿಕ ಗುಣಗಳು ಮತ್ತು ಸೌತೆಕಾಯಿಯ ತಾಜಾತನವನ್ನು ಒಳಗೊಂಡಿರುವ ಈ ದೋಸೆ, ಸಾಂಪ್ರದಾಯಿಕ ರುಚಿಗೆ ಆರೋಗ್ಯಕರ ಸ್ಪರ್ಶ ನೀಡುತ್ತದೆ.

ಅಕ್ಕಿ ದೋಸೆಗಿಂತ ವಿಭಿನ್ನವಾಗಿರುವ ಈ ದೋಸೆ ಮೃದುವಾಗಿ, ಸುವಾಸನೆಯಿಂದ ಕೂಡಿದ್ದು, ಜೀರ್ಣಕ್ರಿಯೆಗೂ ಸಹಾಯಕವಾಗಿದೆ. ನವಣೆಯಲ್ಲಿ ನಾರಿನಾಂಶ, ಖನಿಜಾಂಶಗಳು ಹಾಗೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಸೌತೆಕಾಯಿ ಸೇರಿಸುವುದರಿಂದ ದೋಸೆಗೆ ವಿಶಿಷ್ಟವಾದ ರುಚಿ, ಮೃದುತ್ವ ಹಾಗೂ ತಾಜಾ ಸುವಾಸನೆ ದೊರೆಯುತ್ತದೆ. ಹೆಚ್ಚಿನ ನೆನೆಸುವಿಕೆ ಅಥವಾ ಸಂಕೀರ್ಣ ತಯಾರಿ ಅಗತ್ಯವಿಲ್ಲದೆ ಸುಲಭವಾಗಿ ಮಾಡಬಹುದಾದ ಈ ದೋಸೆ, ಬೆಳಗಿನ ಉಪಾಹಾರ, ಸಂಜೆ ತಿಂಡಿ ಅಥವಾ ಲಘು ಊಟಕ್ಕೂ ಸೂಕ್ತವಾಗಿದೆ.

ಸವಿಯಲು ರುಚಿಯಾಗಿರುವ ಈ ಆರೋಗ್ಯಕರ ದೋಸೆಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ...

ಬೇಕಾಗುವ ಸಾಮಗ್ರಿಗಳು...

  • ನವಣೆ (Foxtail Millet) – 2 ಬಟ್ಟಲು

  • ಸೌತೆಕಾಯಿ – 1 ದೊಡ್ಡದು (ತುರಿದದ್ದು)

  • ತೆಂಗಿನ ತುರಿ – ½ ಬಟ್ಟಲು

  • ಅಕ್ಕಿ – ½ ಬಟ್ಟಲು

  • ಅವಲಕ್ಕಿ – ¼ ಬಟ್ಟಲು

  • ಜೀರಿಗೆ – 1 ಚಮಚ

  • ಹಸಿಮೆಣಸಿನಕಾಯಿ – 2 (ಐಚ್ಛಿಕ)

  • ಉಪ್ಪು – ರುಚಿಗೆ ತಕ್ಕಷ್ಟು

  • ನೀರು – ಅಗತ್ಯಕ್ಕೆ ತಕ್ಕಷ್ಟು

  • ಎಣ್ಣೆ ಅಥವಾ ತುಪ್ಪ – ದೋಸೆ ಬೇಯಿಸಲು

ಮಾಡುವ ವಿಧಾನ...

  • ನವಣೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು 4–5 ಗಂಟೆಗಳ ಕಾಲ ನೆನೆಸಿಡಿ.

  • ಅವಲಕ್ಕಿಯನ್ನು 15–20 ನಿಮಿಷ ನೆನೆಸಿಡಿ.

  • ನೆನೆಸಿದ ನವಣೆ, ಅಕ್ಕಿ ಮತ್ತು ಅವಲಕ್ಕಿಯನ್ನು ತೆಂಗಿನ ತುರಿ ಹಾಗೂ ಜೀರಿಗೆಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

  • ರುಬ್ಬಿದ ಹಿಟ್ಟಿಗೆ ತುರಿದ ಸೌತೆಕಾಯಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

  • ಈ ಹಿಟ್ಟನ್ನು 2–4 ಗಂಟೆಗಳ ಕಾಲ ನೆನೆಯಲು ಬಿಡಿ. (ಸೌತೆಕಾಯಿ ನೀರು ಬಿಡುವುದರಿಂದ ಅಗತ್ಯವಿದ್ದರೆ ಮಾತ್ರ ನೀರು ಸೇರಿಸಿ.)

  • ತವಾ ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ.

  • ಹಿಟ್ಟನ್ನು ದೋಸೆಯಂತೆ ತೆಳುವಾಗಿ ಅಥವಾ ಸ್ವಲ್ಪ ದಪ್ಪವಾಗಿ ಹರಡಿ.

  • ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿ, ಬಿಸಿ ಬಿಸಿಯಾಗಿರುವಾಗಲೇ ಬಡಿಸಿ. ಈ ದೋಸೆಯನನು ತೆಂಗಿನ ಚಟ್ನಿ ಅಥವಾಗ ಕಡಲೆಕಾಯಿ ಚಟ್ನಿ, ಬೆಣ್ಣೆ ಅಥವಾ ತುಪ್ಪ, ಸಾಂಬಾರ್ ಜೊತೆ ತಿನ್ನಬಹುದು.

ಟಿಪ್ಸ್...

  • ಹೆಚ್ಚು ಮೃದುವಾದ ದೋಸೆ ಬೇಕಿದ್ದರೆ ಸ್ವಲ್ಪ ಅವಲಕ್ಕಿ ಪ್ರಮಾಣ ಹೆಚ್ಚಿಸಬಹುದು.

  • ಸೌತೆಕಾಯಿಯನ್ನು ಸಿಪ್ಪೆ ಸಮೇತ ಬಳಸಿದರೆ ರುಚಿ ಮತ್ತು ಪೌಷ್ಟಿಕಾಂಶ ಹೆಚ್ಚುತ್ತದೆ.

  • ಹಿಟ್ಟನ್ನು ಹೆಚ್ಚು ಹುಳಿಯಾಗಿಸದೆ ತಾಜಾ ರುಚಿಯಲ್ಲಿ ತಯಾರಿಸಿದರೆ ಸೌತೆಕಾಯಿಯ ಸುವಾಸನೆ ಚೆನ್ನಾಗಿ ಉಳಿಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ? ಮಧ್ಯಾಹ್ನ 12.30 ಕ್ಕೆ CJP, ಕೇಂದ್ರ ಸರ್ಕಾರದ ನಡುವೆ ಮಹತ್ವದ ಮಾತುಕತೆ

ಕೇಂದ್ರದ ಭರವಸೆಗೆ ಮಣಿದ Sonam Wangchuk: 26 ದಿನಗಳ ಉಪವಾಸ ಅಂತ್ಯ, Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!

ಸತತ 13ನೇ ದಿನವೂ ಇರಾನ್ ಮೇಲೆ ಅಮೆರಿಕ ಕ್ಷಿಪಣಿಗಳ ಸುರಿಮಳೆ: ಸೇನಾ ನೆಲೆಗಳೇ ಪ್ರಮುಖ ಗುರಿ, 'ಇನ್ನೂ ದೊಡ್ಡ ಹೊಡೆತ ನೀಡುತ್ತೇವೆ'- ಟ್ರಂಪ್ ಎಚ್ಚರಿಕೆ

Iranಗೆ Trump ಬಿಗ್ ಶಾಕ್: ಮುಟ್ಟುಗೋಲು ಆಸ್ತಿಯಿಂದಲೇ ಹಡಗುಗಳ ನಷ್ಟ ಭರಿಸಲು ಆದೇಶ..!

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಕೇಂದ್ರ ಸರ್ಕಾರದಿಂದ ಮೊದಲ ಕ್ರಮ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಎತ್ತಂಗಡಿ